ರಾಘವೇಂದ್ರ ಹುಣಸೂರ್ ಹೊಗಳಿದರೆ ಪ್ರಶಸ್ತಿ!

Award for praising Raghavendra Hunsur

03-11-2020 647

ಇತ್ತೀಚೆಗೆ ಜಿ ಕುಟುಂಬ ಕಾರ್ಯಕ್ರಮ ಜನಪ್ರಿಯ ವಾಹಿನಿ ಜಿ ಕನ್ನಡದಲ್ಲಿ ಪ್ರಸಾರವಾಯಿತು. ಸಾರ್ವಜನಿಕರು ಭಾಗವಹಿಸದಿದ್ದರೂ ಅದ್ದೂರಿಯಾಗಿ ನಡೆದ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಪ್ರಸಾರವಾಯಿತು. ವಿವಿಧ ಬಹುಮಾನಗಳನ್ನು ಕಾರ್ಯಕ್ರಮಕ್ಕೆ ಸಂಬಂಧಪಟ್ಟವರಿಗೆ ನೀಡಲಾಯಿತು. ಬರಿ ಹೊಗಳಿಕೆಗೇ ಮೀಸಲಾಗಿಟ್ಟಂತಿದ್ದ ಕಾರ್ಯಕ್ರಮದ ತುಂಬಾ ಒಬ್ಬ ವ್ಯಕ್ತಿಯ ಹೆಸರು ಆಗಾಗ ಕೇಳಿ ಬರುತ್ತಿತ್ತು. ಸ್ಟೇಜ್ ಹತ್ತಿದವರೆಲ್ಲ ಮತ್ತು ಪ್ರಶಸ್ತಿ ಪಡೆದವರೆಲ್ಲ ಚಾನಲ್ ನ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರವರ ಹೆಸರನ್ನು ಹೇಳಿ ಅವರಿಗೆ ಗೌರವ ಅರ್ಪಿಸುತ್ತಿದ್ದಿದ್ದು ಸಾಮಾನ್ಯ ವೀಕ್ಷಕರ ಕಿವಿಗೂ ರಾಚುವಂತಿತ್ತು. ಪ್ರಶಸ್ತಿ  ಗೆದ್ದವರೆಲ್ಲ ಆ ಪ್ರಶಸ್ತಿ ಗೆದ್ದಿದ್ದು ರಾಘವೇಂದ್ರ ಅವರ ಕೃಪೆಯಿಂದಲೇ ಎನ್ನುವಂತೆ ಅದನ್ನು ವಿನಮ್ರತೆಯಿಂದ ಸಾರಿದರು. ಹಾಗೆ ನೋಡಿದರೆ ರಾಘವೇಂದ್ರ ಹುಣಸೂರು ಜಿ ಕನ್ನಡದಲ್ಲಿ ಒಬ್ಬ ಉದ್ಯೋಗಿ ಅಷ್ಟೇ. ಅವರ ಕೆಲಸ ಜಿ ಕನ್ನಡ ಲಾಭದಲ್ಲಿ ನಡೆಯುವಂತೆ ನೋಡಿಕೊಳ್ಳುವುದಷ್ಟೇ. ಆದರೆ ಈ ಕಾರ್ಯಕ್ರಮ ನೋಡಿದವರಿಗೆಲ್ಲ ರಾಘವೇಂದ್ರ ಹುಣಸೂರು ಅವರೇ ಜಿ ಕನ್ನಡ ಚಾನಲ್ ಮತ್ತು ಜಿ ಕನ್ನಡ ಚಾನಲ್ ಅಂದರೆ ರಾಘವೇಂದ್ರ ಹುಣಸೂರು ಎನ್ನುವಂತೆ ಭಾಸವಾಗಿದ್ದರೆ ಅದು ಅವರ ತಪ್ಪಲ್ಲ. ರಾಘವೇಂದ್ರ ಅವರು ಈ ಟಿವಿ ಕನ್ನಡದಲ್ಲಿದ್ದಾಗ ಕೆಲವು ರಿಯಾಲಿಟಿ ಶೋಗಳ  ಮೂಲಕ ಹೆಸರು ಮಾಡಿದ್ದರು. ಅವರು ಜಿ ಟಿವಿ ಗೆ ಬಂದ ಮೇಲೆ ಅದೃಷ್ಟವೆಂಬಂತೆ ಬರಿ ಭಟ್ಟಿ ಇಳಿಸಿದ ಅಥವ ರಿಮೇಕ್ ಸೀರಿಯಲ್ಗಳ ಮೂಲಕ ಹಾಗು ವಿಪರೀತ ಖರ್ಚು ಮಾಡಿ ರಿಯಾಲಿಟಿ ಕಾರ್ಯಕ್ರಮ ಮಾಡುವ ಮೂಲಕ ಜಿ ಟಿವಿ ಗೆ ಒಂದಷ್ಟು ಹೆಚ್ಚು ನಂಬರ್ ಗಳನ್ನೂ ಟಿಆರ್ಪಿ ಯಲ್ಲಿ ತಂದು ಕೊಡುವಲ್ಲಿ ಯಶಸ್ಸು ಕಂಡರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗೆಗಿನ ಡಬ್ ಮಾಡಿದ ಸೀರಿಯಲ್ ಮಾಹಾ ನಾಯಕ ಎಡವುತ್ತಿದ್ದಾಗ ತಮಗೆ ಆ ಸೀರಿಯಲ್ ಮಾಡಬಾರದು ಎಂಬ ಬೆದರಿಕೆ ಕರೆಗಳು ಬರುತ್ತಿವೆಯೆಂದು ಅತ್ತು ಕರೆದು ಜನರಿಂದ ಪ್ರಸಾರ ಮುಂದುವರೆಸಿದಕ್ಕಾಗಿ ಮಾಲೆ ಹಾಕಿಸಿಕೊಂಡು ಜೈಕಾರ ಕೂಗಿಸಿಕೊಂಡ ರಾಘವೇಂದ್ರ ಪ್ರತಿಯೊಂದನ್ನೂ ತಮ್ಮ ವಯಕ್ತಿಕ ವರ್ಚಸ್ಸಿಗಾಗೇ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪದೊಂದಿಗೆ ಈ ಜಿ ಕುಟುಂಬ ಕಾರ್ಯಕ್ರಮದಲ್ಲಂತೂ ತಾವೊಬ್ಬ ರಾಜಕಾರಣಿಗೆ ಕಡಿಮೆ ಇಲ್ಲ ಎಂಬಂತೆ ಹೊಗಳಿಸಿಕೊಂಡು ಅದನ್ನು ವೀಕ್ಷರಿಗೂ ತೋರಿಸಿದ್ದು ಅವರ ಮಾರ್ಕೆಟಿಂಗ್ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಒಬ್ಬ ಮಂತ್ರಿಯನ್ನೂ ನಾಚಿಸುವಂತೆ ಭಾಷಣ ಬಿಗಿದ ರಾಘವೇಂದ್ರ ತಾನೇ ಎಲ್ಲವನ್ನೂ ಮಾಡಿದ್ದು ಎಂಬಂತೆ ಬೀಗಿದ್ದು ಮಾತ್ರವಲ್ಲದೆ ಕೊನೆಗೆ ಕೆಲವು ವ್ಯಕ್ತಿಗಳನ್ನು ಕರೆದು ಇವರು ನನ್ನ ಕ್ಲೆಸ್ಟರ್ ಹೆಡ್, ನನ್ನ ಫಿಕ್ಷನ್ ಹೆಡ್ ಎಂದು ಹೇಳಿ ಜಿ ತನ್ನ ವಯಕ್ತಿಕ ಆಸ್ತಿ ಎಂಬಂತೆ ಮಾತಾಡಿದ್ದೂ ಜನರ ಗಮನಕ್ಕೆ ಬಂದಿದೆ. ರಿಮೇಕ್ ಗಳ  ಸರಕು ಮುಗಿದ ಮೇಲೆ ಮತ್ತು ತೋರಿಸಿದ್ದನ್ನೇ ತೋರಿಸಿ ಆದಮೇಲೆ ಈ ರಾಘವೇಂದ್ರ ಅವರೊಂದಿಗೆ ಜಿ ಯಾವ ರೀತಿ ನಂಬರ್ ಒನ್ ಆಗೇ ಉಳಿಯಲಿದೆ ಎಂದು ಕಾದು ನೋಡಬೇಕಷ್ಟೆ.ಸಂಬಂಧಿತ ಟ್ಯಾಗ್ಗಳು

#zeekutumba #zeeawards #kannadatv #zeekannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


hlWNXOSIjPsc
  • cQlrsIiWRB
  • pzdkWMNbLBQF
BGRAoSfOFKXn
  • PscLNGDl
  • PDnokaTM
ySvIeFmJCnYH
  • mRMDHSrpeiCz
  • qnMKXLpxvGDJcBT
kJAhVoEFsvnzSep
  • LgIQrqhl
  • iPRGzKkQXm
BqPvNbEtKQo
  • ILfoADdzgTPh
  • HybfAZPCsjmWBl