ಸೋಮವಾರ ಡಿಕೆ ದೆಹಲಿಗೆ

DK to Delhi on Monday

11-09-2020 402

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಅನೇಕ ನಿರ್ಬಂಧಗಳ ಕಾರಣದಿಂದಾಗಿ ಮತ್ತು ಅನೇಕ ಕಾರ್ಯಕ್ರಮಗಳನ್ನ ಮತ್ತು ಹೋರಾಟಗಳನ್ನು ಹಮ್ಮಿಕೊಂಡಿದ್ದರಿಂದಾಗಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಮಾಡಲು ಆಗಿರಲಿಲ್ಲ. ಪ್ರತಿಜ್ಞಾ ದಿನದಂದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ಮಾಡಿ ಶುಭ ಕೋರಿದ್ದರೂ ತಮ್ಮ ನೆಚ್ಚಿನ ನಾಯಕಿ ಸೋನಿಯಾರವರನ್ನು ಭೇಟಿಮಾಡಲು ಉತ್ಸುಕರಾಗಿದ್ದ ಡಿಕೆಯವರಿಗೆ ಈಗ ಅದಕ್ಕೆ ಅವಕಾಶ ಒದಗಿ ಬಂದಿದೆ.

ಇದೇ ಸೋಮವಾರ ಎಂದರೆ ಆಗಸ್ಟ್ 17 ರಂದು ಡಿಕೆಯವರು ದೆಹಲಿಗೆ ಪ್ರಯಾಣಿಸಲಿದ್ದು ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಡಿಕೆಯವರೊಂದಿಗೆ ಅವರ ಸಹೋದರ ಡಿಕೆ ಸುರೇಶ ಅವರೂ ಕೂಡ ದೆಹಲಿಯ ಭೇಟಿಗೆ ಹೊಗಲಿದ್ದಾರೆ ಎಂದು ತಿಳಿದುಬಂದಿದೆ. ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಪಕ್ಷದ ಇನ್ನಿತರ ನಾಯಕರನ್ನೂ ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆಂದು ಮಾಹಿತಿ ಬಂದಿದೆ. ಈ ದೆಹಲಿ ಭೇಟಿ ಡಿಕೆ ಶಿವಕುಮಾರ್ ಅವರಿಗೆ ಬಹಳ ಮಹತ್ವದ್ದಾಗಿದೆ ಎಂದೂ ಹೇಳಲಾಗಿದೆ. 

 ಸಂಬಂಧಿತ ಟ್ಯಾಗ್ಗಳು

ಸೋಮವಾರ ಡಿಕೆ ದೆಹಲಿಗೆ ಭೇಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ