‘ಮೋದಿ ದೇಶಕ್ಕೆ ಮೋಸ ಮಾಡ್ತಿದ್ದಾರೆ’

"Modi has betrayed to nation and karnataka

04-01-2018 152

ತುಮಕೂರು: ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಬಂದಮೇಲೆ ಹೀನಾಯ ಹಿಂಸೆ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಮಹಾರಾಷ್ಟ್ರದಲ್ಲಿ ದಲಿತರ ಮೇಲೆ ಆಕ್ರಮಣವಾಗಿದೆ, ನರೇಂದ್ರ ಮೋದಿ ಅವರು ಕರ್ನಾಟಕ ಹಾಗೂ ದೇಶಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಏಕಾಂಗಿಯಾಗಿ ರೈತರ ಹಾಗೂ ದಲಿತರ ಪರ ಹೋರಾಟ ನಡೆಸಿದ್ದಾರೆ, ಕಾಂಗ್ರೆಸ್ ಪಕ್ಷದ ಯಾರೊಬ್ಬರು ಏನನ್ನೂ ಅಪೇಕ್ಷೆ ಪಡುವವರಲ್ಲ. ಇನ್ನು ಜೆಡಿಎಸ್ ಪಕ್ಷ ಒಂದು ಕಡೆ ಬಿಜೆಪಿಯನ್ನು ಸೋಲಿಸಿ ಅಂತಾರೆ, ಇನ್ನೊಂದು ಕಡೆ ಗೆಲ್ಲಿಸಲು ಪ್ರಯತ್ನ ನಡೆಸ್ತಾರೆ ಎಂದು ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಎಲ್ಲರೂ ಒಗ್ಗಟ್ಟಾಗಿರೋ ಪಕ್ಷ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ಅಲ್ಲದೇ ತುಮಕೂರಿನಲ್ಲಿಯೂ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್  ಜಯಭೇರಿ ಬಾರಿಸಲಿದೆ ಎಂದು ನುಡಿದಿದ್ದಾರೆ.ಸಂಬಂಧಿತ ಟ್ಯಾಗ್ಗಳು

venugopal AICC ನರೇಂದ್ರ ಮೋದಿ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ