'ಶೀಘ್ರದಲ್ಲೇ ಆರ್.ಅಶೋಕ್ ಅಕ್ರಮ ಬಯಲು ಮಾಡ್ತೇನೆ'

H.M revanna reaction on R.ashok aligation

04-01-2018 619

ನವದೆಹಲಿ: ಒಂದು ವಾರದೊಳಗೆ ಆರ್.ಅಶೋಕ್ ಅವರ ಅಕ್ರಮವನ್ನು ಬಯಲಿಗೆಳೆಯುವೆ ಎಂದು  ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಹೇಳಿದ್ದಾರೆ. ದೆಹಲಿಯಲ್ಲಿಂದು ಮಾತನಾಡಿದ ಅವರು, ಮಾಜಿ ಸಾರಿಗೆ ಸಚಿವ ಆರ್.ಅಶೋಕ್ ಅಕ್ರಮದ ಕುರಿತು ಅಧ್ಯಯನ ನಡಿತಿದೆ, ಶೀಘ್ರದಲ್ಲೇ ಅಕ್ರಮ ಬಯಲು ಮಾಡುವೆ ಎಂದಿದ್ದಾರೆ.

ಅಶೋಕ್ ಗಾಜಿನಮನೆಯಲ್ಲಿ ಕುಳಿತಿರುವವರು, ಅಶೋಕ್ ಸಿಎಂ ಮೇಲೆ‌ ಮಾಡಿರುವ ಆರೋಪ ನಿರಾಧಾರ ಎಂದು ಹೇಳಿದ್ದಾರೆ. ಅಲ್ಲದೇ ಅಮಿತ್ ಷಾ ರಾಜ್ಯಕ್ಕೆ ಬಂದುಹೋದ ಮೇಲೆ ಪ್ರಚೋದನೆ‌ ಹೆಚ್ಚಾಗುತ್ತಿದೆ. ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಮಾಡುತ್ತಿದ್ದ ಕೆಲಸವನ್ನು ಈಗ ಅಶೋಕ್ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.ಸಂಬಂಧಿತ ಟ್ಯಾಗ್ಗಳು

H.M revanna R.ashok ಅಕ್ರಮ ಪ್ರತಾಪ್ ಸಿಂಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ