ರೈಲ್ವೆ ಡೆಬಿಟ್ ಕಾರ್ಡ್…

railway debit card soon..!

03-01-2018 378

ಡಿಜಿಟಲ್ ಇಂಡಿಯಾ ಚಿಂತನೆಗೆ ಮತ್ತಷ್ಟು ಒತ್ತು ಕೊಡಲು ನಿರ್ಧರಿಸಿರುವ ರೈಲ್ವೆ ಇಲಾಖೆ, ಇದೀಗ ತನ್ನದೇ ಆದ ಡೆಬಿಟ್ ಕಾರ್ಡ್ ಲಾಂಚ್ ಮಾಡಲು ನಿರ್ಧರಿಸಿದೆ. ಭಾರತವನ್ನು ಕ್ಯಾಷ್ ಲೆಸ್ ಎಕಾನಮಿ ಅಂದರೆ, ಹೆಚ್ಚಿನ ರೀತಿಯಲ್ಲಿ ನಗದು ರಹಿತ ವ್ಯವಹಾರ ನಡೆಸುವಂಥ ದೇಶವಾಗಿಸುವ ನಿಟ್ಟಿನಲ್ಲಿ ಎಸ್‌ಬಿಐ ಮತ್ತು ಐಆರ್‌ಸಿಟಿಸಿ ಜೊತೆಗೂಡಿ, ರೈಲ್ವೆ ಡೆಬಿಟ್ ಕಾರ್ಡ್ ಚಾಲನೆಗೆ ತರಲಿದೆ.

ಇದರ ಜೊತೆಗೆ, ಆನ್‌ಲೈನ್ ಬುಕಿಂಗ್ ಹೆಚ್ಚು ಮಾಡುವುದಕ್ಕಾಗಿ ಪ್ರತಿ ತಿಂಗಳೂ ಲಾಟರಿ ಸ್ಕೀಮ್ ಕೂಡ ಜಾರಿಗೆ ತರಲಿದೆ. ಆನ್‌ಲೈನ್‌ ಮೂಲಕ ರೈಲು ಟಿಕೆಟ್ ಬುಕ್ ಮಾಡಿದ 10 ಜನ ಅದೃಷ್ಟವಂತ ಪ್ರಯಾಣಿಕರಿಗೆ ಶೇ.100 ರಷ್ಟು ಹಣ ವಾಪಸ್ ಸಿಗಲಿದೆ. ರೈಲ್ವೆ ಡೆಬಿಟ್ ಕಾರ್ಡ್‌ ಅನ್ನು ಕೇವಲ ರೈಲ್ವೆ ವ್ಯವಹಾರಗಳಿಗೆ ಮಾತ್ರವಲ್ಲದೆ ಬೇರೆ ಎಲ್ಲರೀತಿಯ ವ್ಯವಹಾರಗಳಿಗೂ ಬಳಸಬಹುದಾಗಿದೆ.

ಡೀಮಾನಿಟೈಸೇಷನ್ ಅಂದರೆ, ಹಳೆಯ ಒಂದು ಸಾವಿರ ಮತ್ತು ಐದುನೂರು ರೂಪಾಯಿಗಳ ನೋಟು ರದ್ದತಿ ನಂತರ, ಐಆರ್‌ಸಿಟಿಸಿ ಅಂದರೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಸುಮಾರು 600 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ, ಆನ್ ಲೈನ್ ಟಿಕೆಟ್ ಬುಕಿಂಗ್ ಶುಲ್ಕ(ಸ್ಲೀಪರ್ ದರ್ಜೆಗೆ 20 ರೂ. ಮತ್ತು ಎಸಿ ಕ್ಲಾಸ್‌ಗೆ 40 ರೂ.) ರದ್ದು ಪಡಿಸಲಾಗಿತ್ತು. ಈ ರಿಯಾಯಿತಿಯನ್ನು ಮಾರ್ಚ್ 2018ರ ವರೆಗೆ ಮುಂದುವರಿಸಲಾಗಿದೆ.ಸಂಬಂಧಿತ ಟ್ಯಾಗ್ಗಳು

Railway debit card ಸ್ಲೀಪರ್ ಡೆಬಿಟ್ ಕಾರ್ಡ್‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ