ಪ್ರೇಮಸೌಧದ ಎಂಟ್ರಿಗೆ ಲಿಮಿಟ್ ಫಿಕ್ಸ್..

only 40K Tourist entry at Taj Mahal..?

03-01-2018 292

ನೀವೇನಾದ್ರೂ ಉತ್ತರ ಭಾರತದ ಕಡೆ ಪ್ರವಾಸ ಹೊರಟಿದ್ದೀರಾ? ಆಗ್ರಾದಲ್ಲಿರೋ ಪ್ರಸಿದ್ಧ ತಾಜ್ ಮಹಲ್ ಕೂಡ ನಿಮ್ಮ ಟೂರ್‌ ಲಿಸ್ಟ್‌ನಲ್ಲಿದೆಯೇ? ಹಾಗಿದ್ರೆ, ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು. ಇನ್ನುಮೇಲೆ, ಪ್ರತಿದಿನ 40 ಸಾವಿರ ಪ್ರವಾಸಿಗರಿಗಷ್ಟೇ ತಾಜ್ ಮಹಲ್ ವೀಕ್ಷಣೆಗೆ ಅವಕಾಶ. ತಾಜ್‌ ಮಹಲ್ ಉಸ್ತುವಾರಿ ನೋಡಿಕೊಳ್ಳುವ ಪುರಾತತ್ವ ಇಲಾಖೆಯವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

1983ರಲ್ಲೇ ಯುನೆಸ್ಕೊದಿಂದ ವಿಶ್ವ ಪರಂಪರೆ ತಾಣದ ಸ್ಥಾನಮಾನ ಪಡೆದಿರುವ ತಾಜ್ ಮಹಲ್, ಮೊಘಲ್ ವಾಸ್ತುಶಿಲ್ಪಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ. 17ನೇ ಶತಮಾನದ ಈ ಪ್ರೇಮಸೌಧ ಮತ್ತು ಅದರ ಸೌಂದರ್ಯವನ್ನು ದೀರ್ಘ ಕಾಲದವರೆಗೆ ರಕ್ಷಣೆ ಮಾಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆಯಂತೆ. ಈವರೆಗೆ, ಪ್ರತಿದಿನ 60 ರಿಂದ 70 ಸಾವಿರ ಜನ ತಾಜ್‌ ಮಹಲ್ ವೀಕ್ಷಿಸುತ್ತಿದ್ದರು.

ಒಟ್ಟಿನಲ್ಲಿ, ನೀವು ಯಾವ ದಿನ ತಾಜ್ ಮಹಲ್‌ಗೆ ಭೇಟಿ ನೀಡುತ್ತೀರಿ ಅನ್ನುವುದನ್ನು ನಿರ್ಧರಿಸಿ, ಮೊದಲೇ ಆ ದಿನಕ್ಕೆ ಆನ್‌ಲೈನ್ ಮೂಲಕ ಟಿಕೆಟ್ ಖರೀದಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಆಗ್ರಾ ನಗರಕ್ಕೆ ಭೇಟಿ ನೀಡಿಯೂ ತಾಜ್ ಮಹಲ್ ನೋಡುವ ಅವಕಾಶ ತಪ್ಪಿಹೋಗಬಹುದು. ಅಂಥ ಸಂದರ್ಭದಲ್ಲಿ, ನೀವು ಆಗ್ರಾ ನಗರದ ಸ್ವೀಟ್ ಸ್ಟಾಲ್‌ಗಳಿಗೆ ಭೇಟಿ ನೀಡಿ ಹಲವಾರು ಸ್ವೀಟ್‌ಗಳ ರುಚಿ ನೋಡಿ, ನಮಗೂ ಒಂದಿಷ್ಟು ತರಬಹುದು.ಸಂಬಂಧಿತ ಟ್ಯಾಗ್ಗಳು

Taj Mahal Archaeological ಆನ್‌ಲೈನ್ ಪುರಾತತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ