ಬೈಕ್ ಅಪಘಾತ: ಸ್ನೇತರಿಬ್ಬರ ಸಾವು

Bike Accident: two died

02-01-2018 730

ಮಂಡ್ಯ: ವೇಗವಾಗಿ ಬೈಕ್‍ನಲ್ಲಿ ಬರುತ್ತಿದ್ದ ಯುವಕರಿಬ್ಬರು ಬ್ಯಾರಿಕೇಡ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ನಾಗಮಂಗಲ ತಾಲ್ಲೂಕಿನ ಚೌಡೇನಹಳ್ಳಿ ಸಮೀಪ ನಡೆದಿದೆ.

ನಾಗಮಂಗಲದ  ಪವನ್(23) ಮತ್ತು ಪ್ರದೀಪ್(22)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಹುಲಿಯೂರು ದುರ್ಗದಲ್ಲಿ ಅಕ್ಕನ ಮನೆಯಲ್ಲಿದ್ದ ಪವನ್‍ನನ್ನು ಗೆಳೆಯ ಪ್ರದೀಪ್ ಹೊಸ ವರ್ಷದ ಆಚರಣೆಗಾಗಿ ಊರಿಗೆ ಕರೆಸಿಕೊಂಡಿದ್ದ. ಗೆಳೆಯರಿಬ್ಬರು ಹೊಸವರ್ಷದ ಪಾರ್ಟಿ ಮುಗಿಸಿಕೊಂಡು ತಡರಾತ್ರಿ ಬೆಳ್ಳೂರು ಕ್ರಾಸ್ ಕಡೆಯಿಂದ ನಾಗಮಂಗಲಕ್ಕೆ ವಾಪಸಾಗುತ್ತಿದ್ದರು.

ಈ ವೇಳೆ ಚೌಡೇನಹಳ್ಳಿಯ ಚೆಕ್‍ ಪೋಸ್ಟ್ ಬಳಿ ಹಾಕಿದ್ದ ಬ್ಯಾರಿಕೇಡ್‍ಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಗೆಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಯುವಕರು ನಾಗಮಂಗಲ ಪಟ್ಟಣದ ನಿವಾಸಿಗಳಾಗಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಬಂಧಿತ ಟ್ಯಾಗ್ಗಳು

Accident Spot out ಆಕ್ರಂದನ ಬ್ಯಾರಿಕೇಡ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ