ವಿಧಾನಸೌಧದಲ್ಲೇ ವ್ಯಕ್ತಿಗೆ ಹೃದಯಾಘಾತ

heart attack to a person in vidhana soudha

02-01-2018 217

ಬೆಂಗಳೂರು: ವಿಧಾನಸೌಧದಲ್ಲಿ ಎದೆ ನೋವಿನಿಂದ ಅಸ್ವಸ್ಥಗೊಂಡು ಲಘು ಹೃದಯಾಘಾತವಾಗಿದ್ದ ಸಿಬ್ಬಂದಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಅಲ್ಲಿನ ಸಿಬ್ಬಂದಿ ವ್ಹೀಲ್‍ಚೇರ್ ಇಲ್ಲದೇ ಪರದಾಡಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಚಿವಾಲಯ ಸಿಬ್ಬಂದಿ ಅಮ್ಜದ್ ಪಾಶಾ ಅವರು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದಿದ್ದ ವೇಳೆ ವಿಧಾನ ಸೌಧದ ಒಳಗಡೆಯೇ ಅಸ್ವಸ್ಥರಾಗಿದ್ದು, ಕೂಡಲೇ ಅವರಿಗೆ ತುರ್ತು ಚಿಕಿತ್ಸಾ ಸೌಲಭ್ಯವಿಲ್ಲದೇ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.

ಹೃದಯಾಘಾತ ಸಂಭವಿಸಿ ಪಾಶಾ ಬಿದ್ದಿದ್ದರೂ ಒಂದೆಡೆ ಸ್ಟ್ರೆಚರ್ ವ್ಹೀಲ್‍ಚೇರ್ ವ್ಯವಸ್ಥೆಯೂ ಇರಲಿಲ್ಲ. ಇನ್ನೊಂದೆಡೆ ಆಂಬುಲೆನ್ಸ್ ಕೂಡ ತಡವಾಗಿ ಬಂದಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಕಚೇರಿ ಕುರ್ಚಿಯ ಮೂಲಕವೇ ಅವರನ್ನು ಸಚಿವಾಲಯ ಕಚೇರಿಯಿಂದ ಹೊರಗಡೆ ಕರೆತಂದಿದ್ದು, ಬಳಿಕ ಆಂಬುಲೆನ್ಸ್ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಪಾಶಾ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎಂದು ತಿಳಿದುಬಂದಿದೆ.ಸಂಬಂಧಿತ ಟ್ಯಾಗ್ಗಳು

heart attack wheel chair ಆಂಬುಲೆನ್ಸ್ ಸಚಿವಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ