ಬಿಜೆಪಿ ಕಾರ್ಪೋರೇಟರ್ ಗೂಂಡಾಗಿರಿ..!

complaint against BBMP Corporator

01-01-2018 255

ಬೆಂಗಳೂರು: ಬೆಂಗಳೂರಿನ ಪಾಲಿಕೆ ಸದಸ್ಯರೊಬ್ಬರ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಕಾಡುಗೋಡಿ ಬಿಜೆಪಿ ಕಾರ್ಪೋರೇಟರ್ ಆದಂತಹ ಮುನಿಸ್ವಾಮಿ ವಿರುದ್ಧ ರುಕ್ಮಿಣಿ ಎಂಬ ಮಹಿಳೆ ದೂರು ನೀಡಿದ್ದಾರೆ. ಕಾರ್ಪೋರೇಟರ್ ಮುನಿಸ್ವಾಮಿ ಅವರು, ಶಾಸಕ ಅರವಿಂದ ಲಿಂಬಾವಳಿಯವರ ಬೆಂಬಲಿರಾಗಿದ್ದು, ಮುನಿಸ್ವಾಮಿ ಅವರು ಗೂಂಡಾಗಿರಿ ಮಾಡುತ್ತಿದ್ದು, ನನ್ನ ಕಪಾಳಕ್ಕೆ ಹೊಡೆದಿದ್ದಾರೆ, ಅಲ್ಲದೇ ಬೆಂಗಲಿಗರೊಂದಿಗೆ ಸೇರಿ ಸೀರೆ ಎಳೆದಿದ್ದಾರೆ ಎಂದು, ರುಕ್ಮಿಣಿ ಆರೋಪಿಸಿ, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಜಮೀನಿನಲ್ಲಿ ನಿರ್ಮಿಸಿದ್ದ ಶೆಡ್‌ಗಳನ್ನ ಕಾರ್ಪೋರೇಟರ್ ತೆರವುಗೊಳಿಸಿದ್ದರು, ಇದನ್ನು ಪ್ರಶ್ನಿಸಿದ್ದಕ್ಕೆ ರುಕ್ಮಿಣಿ ಎಂಬ ಮಹಿಳೆ ಮೇಲೆ ಕಾರ್ಪೋರೇಟರ್ ರೌಡಿಸಂ ಮಾಡಿ ನಡುರಸ್ತೆಯಲ್ಲೇ ಮಹಿಳೆಯನ್ನು ಎಳೆದಾಡಿದ್ದಾರೆ ಎನ್ನಲಾಗಿದೆ. ಈ ಕುರಿತಂತರ ಮಹಿಳೆ ಮುನಿಸ್ವಾಮಿ ಮೇಲೆ ದೂರು ದಾಖಲಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ