ಕೊಲ್ಕತ್ತಾದಲ್ಲಿ ತೇಲುವ ಮಾರುಕಟ್ಟೆ…

01-01-2018 352
ಥೈಲ್ಯಾಂಡ್ ದೇಶದ ರಾಜಧಾನಿ ಬ್ಯಾಂಕಾಕ್ ಸೇರಿದಂತೆ ಜಗತ್ತಿನ ಹಲವೆಡೆ ಇರುವ ತೇಲುವ ಮಾರುಕಟ್ಟೆಗಳು ತುಂಬಾ ಪ್ರಸಿದ್ಧವಾಗಿವೆ. ಆದರೆ, ಭಾರತದಲ್ಲಿ ಈವರೆಗೆ ಅಂಥ ಯಾವುದೇ ಮಾರುಕಟ್ಟೆ ಇರಲಿಲ್ಲ. ಇದೀಗ ಕೊಲ್ಕತ್ತಾದಲ್ಲಿ ದೇಶದ ಮೊಟ್ಟ ಮೊದಲ ತೇಲುವ ಮಾರುಕಟ್ಟೆ ಸ್ಥಾಪನೆ ಆಗಲಿದೆ. ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ತೇಲುವ ಮಾರುಕಟ್ಟೆ, ಕೊಲ್ಕತ್ತಾದ ಪಟುಲಿ ಪ್ರದೇಶದಲ್ಲಿ ಆರಂಭಗೊಳ್ಳಲಿದೆ.
ಈ ತೇಲುವ ಮಾರುಕಟ್ಟೆ, ಅರ್ಧಕಿಲೋಮೀಟರ್ ಉದ್ದ ಮತ್ತು 60 ಮೀಟರ್ ಅಗಲವಿದ್ದು ಇಲ್ಲಿ 200 ಅಂಗಡಿಗಳು ಆರಂಭಗೊಳ್ಳಲಿವೆ. ಇಲ್ಲಿ, ತರಕಾರಿ, ದಿನಸಿ, ಮೀನು ಮತ್ತು ಮಾಂಸ ಮಾರಾಟಕ್ಕೆ ಪ್ರತ್ಯೇಕ ವಲಯಗಳನ್ನು ನಿಗದಿಪಡಿಸಲಾಗಿದೆ. ಈ ತೇಲುವ ಮಾರುಕಟ್ಟೆಗೆ ಪ್ರವೇಶ ಉಚಿತವಾಗಿದ್ದು, ಇಲ್ಲಿ ವ್ಯಾಪಾರಿಗಳು ಬೋಟುಗಳ ಮೇಲೆ ವಸ್ತುಗಳನ್ನು ಇರಿಸಿಕೊಂಡು ಮಾರಾಟ ಮಾಡುತ್ತಾರೆ, ಜನರು ಅವರನ್ನು ತಲುಪಲು ನಡೆದುಕೊಂಡು ಹೋಗುವಂಥ ಕಾಲುದಾರಿಗಳಿರುತ್ತವೆ.
ಕಾಶ್ಮೀರದ ದಾಲ್ ಸರೋವರದಲ್ಲಿ ಹೌಸ್ ಬೋಟುಗಳ ಮೂಲಕ ಗ್ರಾಹಕರಿಗೆ ವಸ್ತುಗಳನ್ನು ಮಾರುವುದನ್ನು ನಾವು ಸಿನೆಮಾ ಮತ್ತು ಟಿವಿಯಲ್ಲಿ ನೋಡಿದ್ದೆವು, ಆದರೆ, ಇದೀಗ ದೇಶದ ಮೊದಲ ಮತ್ತು ಏಷ್ಯಾದ ಮೂರನೇ ತೇಲುವ ಮಾರುಕಟ್ಟೆ ಕೊಲ್ಕತ್ತಾದಲ್ಲಿ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ಕೂಡ, ಹೊಸ ರೀತಿಯ ಶಾಪಿಂಗ್ ಅನುಭವ ನೀಡುವ ಇಂಥ ತೇಲುವ ಮಾರುಕಟ್ಟೆಗಳು ಸ್ಥಾಪನೆಯಾಗಬಹುದು.
ಒಂದು ಕಮೆಂಟನ್ನು ಹಾಕಿ