ಪಾಕಿಗಳಿಗೆ ಪಾದರಕ್ಷೆ ಪ್ರೆಸೆಂಟೇಷನ್!

29-12-2017 450
ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನದ ವಶದಲ್ಲಿದ್ದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಕುಟುಂಬವನ್ನು ನಡೆಸಿಕೊಂಡ ರೀತಿಗೆ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇಸ್ಲಾಮಾಬಾದ್ನಲ್ಲಿ ಕುಲಭೂಷಣ್ ಭೇಟಿಗೆ ತೆರಳಿದ್ದ ತಾಯಿ ಅವಂತಿ ಮತ್ತು ಪತ್ನಿ ಚೇತನ್ ಅವರನ್ನು ಪಾಕ್ ಸರ್ಕಾರ ನಡೆಸಿಕೊಂಡ ರೀತಿ, ಕೇವಲ ಅವರಿಗೆ ಮಾತ್ರ ಮಾಡಿದ ಅಪಮಾನವಲ್ಲ ಇಡೀ ಭಾರತದ ಹೆಣ್ಣುಮಕ್ಕಳಿಗೆ ಮಾಡಿದ ಅಪಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಮ್ಮ ಮತ್ತು ಪತ್ನಿ ಇಬ್ಬರೂ ತಮ್ಮ ತಾಳಿ, ಕುಂಕುಮ ಮತ್ತು ಬಳೆಗಳನ್ನು ತೆಗೆದಿಟ್ಟು ಬೇರೆ ಬಟ್ಟೆ ಧರಿಸುವಂತೆ ಮಾಡಿದ ಪಾಕಿಗಳು, ಜಾಧವ್ ಪತ್ನಿಯ ಚಪ್ಪಲಿಯಲ್ಲಿ ಏನೋ ರಹಸ್ಯವಾದದ್ದು ಇದೆಯೆಂದು ಸಂಶಯ ವ್ಯಕ್ತಪಡಿಸಿ ಅದನ್ನು ವಶಪಡಿಸಿಕೊಂಡಿದ್ದರು. ಪಾಕಿಗಳ ಈ ಕೃತ್ಯಕ್ಕೆ ಮುಯ್ಯಿ ತೀರಿಸಿಕೊಳ್ಳಲು ದೆಹಲಿ ಬಿಜೆಪಿ ಮುಖಂಡರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿದ್ದಾರೆ. ದೆಹಲಿಯಲ್ಲಿರುವ ಪಾಕ್ ಹೈ ಕಮಿಷನರ್ ಕಚೇರಿಗೆ ಒಂದು ಜೊತೆ ಚಪ್ಪಲಿ ಡೆಲಿವರಿ ಮಾಡುವಂತೆ, ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಬಗ್ಗ, ಅಮೆಜಾನ್ ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಆರ್ಡರ್ ಬುಕ್ ಮಾಡಿದ್ದಾರೆ. ಇದಲ್ಲದೆ, ಇತರರಿಗೂ ಹೀಗೆ ಮಾಡುವಂತೆ ಕರೆ ನೀಡಿರುವ ತೇಜಿಂದರ್, ತಾವು ಚಪ್ಪಲಿ ಆರ್ಡರ್ ಮಾಡಿರುವುದರ ಚಿತ್ರವನ್ನು #JutaBhejoPakistan ಎಂದು ಟ್ಚೀಟರ್ನಲ್ಲಿ ಹಾಕಲು ಕೇಳಿಕೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ