ಗೊಡ್ಡು ಸಂಪ್ರದಾಯಕ್ಕೆ ಗುಡ್ ಬೈ…?

cinemas will be allowed in saudi arabia...?

11-12-2017 746

ಸಂಪ್ರದಾಯವಾದಿ ದೇಶ ಸೌದಿ ಅರೇಬಿಯದಲ್ಲಿ 35 ವರ್ಷಗಳಿಗೂ ಹೆಚ್ಚು ಸಮಯದ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಿನೆಮಾ ಥಿಯೇಟರ್ ಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. 2018ರ ಮಾರ್ಚ್ ವೇಳೆಗೆ ಸೌದಿಯಲ್ಲಿ ಹೊಸ ಥಿಯೇಟರ್ ಗಳು ಆರಂಭಗೊಳ್ಳುವ ನಿರೀಕ್ಷೆಯಿದೆ. 1980ರ ದಶಕದಲ್ಲಿ ಇಸ್ಲಾಮೀ ಮೂಲಭೂತವಾದಿಗಳ ಒತ್ತಡದಿಂದಾಗಿ ಸಾರ್ವಜನಿಕ ಮನರಂಜನೆ ಹಾಗೂ ಗಂಡಸರು ಹಾಗೂ ಹೆಂಗಸರು ಒಂದೇ ಕಡೆ ಸೇರುವಂಥ ಎಲ್ಲ ಮನರಂಜನಾ ಸೌಲಭ್ಯಗಳನ್ನು ಮುಚ್ಚಿಹಾಕಲಾಗಿತ್ತು.  

ಇದೀಗ ಸೌದಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರ ಸರ್ಕಾರ, ಹಲವಾರು ಪುರಾತನ ನಿರ್ಬಂಧಗಳನ್ನು ತೆಗೆದುಹಾಕುತ್ತಿದೆ. ಇದೇ ರೀತಿ, ಮಹಿಳೆಯರು ಕಾರು ಮತ್ತಿತರ ಯಾವುದೇ ವಾಹನ ಚಲಾವಣೆ ಮಾಡುವುದಕ್ಕೆ ಇರುವ ನಿರ್ಬಂಧವನ್ನೂ ಕೈಬಿಡಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಯುತ್ತಿರುವ ತೈಲ ಬೆಲೆಗಳ ಕಾರಣದಿಂದ ಸೌದಿ ಅರೇಬಿಯದ ಆರ್ಥಿಕತೆ ಕುಸಿತ ಕಂಡಿದೆ. ಹೀಗಾಗಿ ಮನರಂಜನಾ ಉದ್ಯಮದ ಬೆಳವಣಿಗೆಯಿಂದ ದೇಶದ ಆರ್ಥಿಕತೆ ಸುಧಾರಿಸಬಹುದು ಎಂಬ ಆಶಾಭಾವನೆ ಇದೆ. 2030ರ ವೇಳೆಗೆ ಸೌದಿ ಅರೇಬಿಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಿನೆಮಾ ಸ್ಕ್ರೀನ್ ಗಳನ್ನು ಹೊಂದಿರುವ ಮುನ್ನೂರಕ್ಕೂ ಹೆಚ್ಚು ಸಿನೆಮಾ ಥಿಯೇಟರ್‌ ಗಳು ಆರಂಭವಾಗುವ ನಿರೀಕ್ಷೆ ಇದೆ.ಸಂಬಂಧಿತ ಟ್ಯಾಗ್ಗಳು

saudi arabia cinema theaters ಮೂಲಭೂತವಾದಿ ನಿರ್ಬಂಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ