ನಟಿ ಸಂಯುಕ್ತ ಮೇಲೆ ನಿರ್ಮಾಪಕ ಗರಂ

Producer complaint against samyuktha

28-11-2017 309

ಬೆಂಗಳೂರು: ಕಿರಿಕ್ ಪಾರ್ಟಿ ಸಿನೆಮಾದಲ್ಲಿ ತನ್ನ ನೃತ್ಯದಿಂದ ಗಮನ ಸೆಳೆದಿದ್ದ ನಟಿ ಸಂಯುಕ್ತ ಹೆಗ್ಡೆ ಮೇಲೆ, ಕಾಲೇಜ್ ಕುಮಾರ್ ಸಿನೆಮಾದ ನಿರ್ಮಾಪಕರು ಗರಂ ಆಗಿದ್ದಾರೆ. ಈ ಕುರಿತು ಬೆಂಗಳೂರಿನ ಚಾಲುಕ್ಯ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ನಿರ್ಮಾಪಕರಾದ ಪದ್ಮನಾಭ ಶೆಟ್ಟಿ, ಸಿನೆಮಾ ಚಿತ್ರೀಕರಣ ಶುರುವಾದಾಗಿನಿಂದ ನಟಿ ಸಂಯುಕ್ತಾ ಹೆಗ್ಡೆ ಒಂದಲ್ಲ ಒಂದು ಕಿರಿಕ್ ಮಾಡ್ತಾನೇ ಇದ್ರು, ಸಿನೆಮಾ ರಿಲೀಸಾದ ಮೇಲೆ ಯಾವುದೇ ಪ್ರಚಾರಕ್ಕೂ ಕೈ ಜೋಡಿಸಿಲ್ಲ ಎಂದು ಗರಂ ಆಗಿದ್ದಾರೆ.

ನನಗಾದ ತೊಂದರೆ ಬೇರೆ ನಿರ್ಮಾಪಕನಿಗೆ ಆಗಬಾರದು, ಆದ್ದರಿಂದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದೇನೆ ಎಂದ ಅವರು, ನಟಿ ಸಂಯುಕ್ತಾ ಹೆಗ್ಡೆ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದು, ಅಂತಹ ಹೆಣ್ಣು ಮಕ್ಕಳಿಗೆ ಖಂಡಿತವಾಗ್ಲೂ ಪಬ್ಲಿಸಿಟಿ ಕೊಡ್ಬೇಡಿ, ಕಲಾವಿದರು ಮೊದಲು ನಿರ್ಮಾಪಕರ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ. ಈ ಕುರಿತಂತೆ ಸಂಯುಕ್ತ ಹೆಗ್ಡೆ ವಿರುದ್ಧ ಕಾಲೇಜ್ ಕುಮಾರ ಸಿನಿಮಾ ನಿರ್ಮಾಪಕ ವಾಣಿಜ್ಯ ಮಂಡಳಿಗೆ ಇಂದು ದೂರು ನೀಡಲಿದ್ದಾರೆ ಎಂದೂ ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ