ಕಂಡಕಂಡಲ್ಲಿ ಭಾಷಣ ಬಿಗಿಯುವ ಚೇತನ್!

20-11-2017 396
ಕಂಡ ಕಂಡಲ್ಲಿ ಭಾಷಣ ಮಾಡುವ ಚಾಳಿಯಿರುವ ಚೇತನ್, ಕೆಲವು ದಿನಗಳ ಹಿಂದೆಯಷ್ಟೆ ಸ್ವತಂತ್ರ ಲಿಂಗಾಯತ ಧರ್ಮದ ಸಭೆಯಲ್ಲಿ ಮಿತಿ ಮೀರಿ ಮಾತನಾಡಿ ಎಲ್ಲರಿಂದ ಬೈಸಿಕೊಂಡ ಮೇಲೂ ಕೂಡ ಇನ್ನೂ ಭಾಷಣ ಬಿಗಿಯುವ ತಮ್ಮ ಅಭ್ಯಾಸವನ್ನು ಬಿಟ್ಟಿಲ್ಲವೆಂದು ಹೇಳಬಹುದು. ಭಾನುವಾರದ ಬಿಗ್ ಬಾಸ್ ಕಂತಿನಲ್ಲಿ ಅತಿರಥ ಸಿನೆಮಾ ತಂಡದೊಂದಿಂಗೆ ಬಂದಿದ್ದ ಚೇತನ್ ಬಿಗ್ ಬಾಸ್ ವೇದಿಕೆಯ ಮೇಲೂ ಕೂಡ ಸಿನೆಮಾದ ನೆಪದಲ್ಲಿ ಭಾಷಣ ಬಿಗಿಯಲು ಆರಂಭಿಸಿದ್ದು ಅನೇಕರಿಗೆ ತಮಾಷೆಯಾಗಿ ಕಂಡಿದೆ. ಚೇತನ್ ಉದ್ದೇಶ ಏನೇ ಇದ್ದರೂ ಕೂಡ ತಾನೊಬ್ಬ ಬುದ್ದಿವಂತ ಎಂದು ತೋರಿಸಿಕೊಳ್ಳಲು ಆತ ಪ್ರಯತ್ನಿಸುವುದು ಸಿನೆಮಾ ವಲಯದಲ್ಲಿ ತಮಾಷೆಗೀಡಾಗಿದೆ.
ಅಮೆರಿಕಾದಲ್ಲಿ ಓದಿ ಭಾರತಕ್ಕೆ ಬಂದು ಅಗ್ನಿ ಶ್ರೀಧರ್ ನಿರ್ಮಾಣದ ಸಿನೆಮಾದಲ್ಲಿ ಪಾತ್ರವಹಿಸಿ, ಆನಂತರ ಬಹು ದಿನಗಳ ಕಾಲ ಕನ್ನಡ ಭಾಷೆಯಲ್ಲಿ ಮಾತನಾಡುವಾಗ ಪಠಣ ಮಾಡಿದ ರೀತಿಯಲ್ಲಿ ಪದಗಳನ್ನುದುರಿಸುತ್ತಿದ್ದ ಚೇತನ್ ಈಗೀಗ ಸ್ವಲ್ಪ ಸರಾಗವಾಗಿ ಮಾತಾಡುತ್ತಿದ್ದಾರೆ. ಆದರೂ ಅವಕಾಶ ಸಿಕ್ಕಾಗಲೆಲ್ಲ ನಾನು ಜಾಣ ನನಗೆ ಎಲ್ಲಾ ತಿಳಿದಿದೆ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುವ ಚೇತನ್ ಯಾವುದೇ ಅವಕಾಶವನ್ನು ಬಿಡದೆ ಒಂದಷ್ಟು ತಮ್ಮ ವಿಚಾರಗಳನ್ನು ಜನರ ಕಿವಿಯೊಳಗೆ ತುರುಕಿಬಿಡುತ್ತಾರೆ ಎಂಬ ಆರೋಪ ಅವರ ಮೇಲಿದೆ.
ಒಂದು ಕಮೆಂಟನ್ನು ಹಾಕಿ