ಮರೆಯಲಾಗದ ದುರಂತ...

Kannada News

07-11-2017 256

ಬೆಂಗಳೂರು: ‘ಮಾಸ್ತಿಗುಡಿ' ಚಿತ್ರೀಕರಣದ ವೇಳೆ ಜಲಾಶಯಕ್ಕೆ ಬಿದ್ದು ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವು ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದಿದೆ.

ಕಳೆದ ವರ್ಷ ನವೆಂಬರ್ 7 ರಂದು ನಟ ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ' ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಸ್ಟಂಟ್ ಮಾಡಲು ಹೋಗಿ ಉದಯ್ ಮತ್ತು ಅನಿಲ್ ಮೇಲಿನಿಂದ ತಿಪ್ಪಗೊಂಡನಹಳ್ಳಿ ಕೆರೆಯ ನೀರಿನ ಆಳಕ್ಕೆ ಬಿದ್ದು ಸಾವಿಗೀಡಾಗಿದ್ದರು. ಹೀಗಾಗಿ ಅನಿಲ್ ಮತ್ತು ಉದಯ್ ಅವರ ದುರಂತ ಸಾವಿಗೆ ವರ್ಷವಾದ ಹಿನ್ನೆಲೆಯಲ್ಲಿ ಸ್ನೇಹಿತರು ಕುಟುಂಬಸ್ಥರ ಉಪಸ್ಥಿತಿಯಲ್ಲಿ ಅವರ ಮೊದಲನೇ ಪುಣ್ಯ ತಿಥಿ ಕಾರ್ಯಕ್ರಮ ನಡೆಸಿ ಕಂಬನಿ ಮಿಡಿದರು.

ಬೆಳಿಗ್ಗೆ ಈ ಇಬ್ಬರು ನಟರ ಕುಟುಂಬಸ್ಥರು ಬನಶಂಕರಿ ರುದ್ರಭೂಮಿಯಲ್ಲಿ ಅನಿಲ್, ಉದಯ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅನಿಲ್, ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ, ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಇದಲ್ಲದೇ ಕದಿರೇನಹಳ್ಳಿ ಬ್ರಿಜ್ಡ್ ಸರ್ಕಲ್‍ ನಲ್ಲಿ ಅನಿಲ್-ಉದಯ್ ಸ್ಮಾರಕ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದ್ದು, ಮುಂದಿನ ವರ್ಷದಲ್ಲಿ ಉದ್ಘಾಟನೆಯಾಗಲಿದೆ. ಕದಿರೇನಹಳ್ಳಿ ಬ್ರಿಡ್ಜ್ ಮೇಲೆ ನಡೆಯುತ್ತಿರುವ ಪುಣ್ಯತಿಥಿ ಆಚರಣೆಯಲ್ಲಿ ಅನಿಲ್ ಪತ್ನಿ ರಮ್ಯಾ, ಅನಿಲ್ ತಾಯಿ ವಿಜಯಲಕ್ಷ್ಮಿ ಉದಯ್ ತಾಯಿ ಕೌಶಲ್ಯ ಭಾಗಿಯಾಗಿದ್ದರು.

ಮಾಸ್ತಿಗುಡಿ ನಿರ್ಮಾಪಕ ಸುಂದರ್.ಪಿ. ಗೌಡ, ಚಾರಿಟಬಲ್ ಟ್ರಸ್ಟ್ ನ ಮುಖಂಡತ್ವ ವಹಿಸಿಕೊಂಡು ಪ್ರತಿ ವರ್ಷ ದೀನ ದಲಿತರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಪುಣ್ಯತಿಥಿ ಆಣರಣೆಯ ವೇಳೆ ನಿರ್ಮಾಪಕ ಸುಂದರ್.ಪಿ. ಗೌಡ, ಹಾಗೂ ನಟ ದುನಿಯಾ ವಿಜಯ್ ತಂದೆ ಉಪಸ್ಥಿತಿಯಿದ್ದು, ಚಿತ್ರೀಕರಣವೊಂದರಲ್ಲಿ ಬ್ಯುಸಿಯಾಗಿದ್ದರಿಂದ ದುನಿಯಾ ವಿಜಿ ಪುಣ್ಯತಿಥಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಮಾಸ್ತಿಗುಡಿ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಕೃತಿ ಕರಬಂಧ ಹಾಗೂ ಅಮೂಲ್ಯ ನಟಿಸಿದ್ದರು. ಈ ಚಿತ್ರ ಮೇ 12ರಂದು ಬಿಡುಗಡೆಗೊಂಡಿತ್ತು.ಸಂಬಂಧಿತ ಟ್ಯಾಗ್ಗಳು

Kannada News Karnataka ಚಿತ್ರೀಕರಣ ದುನಿಯಾ ವಿಜಯ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ