ಬಿಗ್ ಬಾಸ್ ತಿರಸ್ಕರಿಸಿದ ಕನ್ನಡ ವೀಕ್ಷಕ…

Kannada News

06-11-2017 770

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಆರಂಭದಲ್ಲೇ ಬೋರ್ ಹೊಡೆಸುತ್ತಿದೆ  ಎಂದು ಸೂಪರ್ ಸುದ್ದಿಯಲ್ಲಿ ನಾವು ವರದಿ ಮಾಡಿದ್ದನ್ನು ನೀವು ಈಗಾಗಲೇ ನೋಡಿರಬಹುದು. ಕಲರ್ಸ್ ಬಳಗದ 2ನೇ ಕನ್ನಡ ಚಾನಲ್ ಆಗಿರುವ ಸೂಪರ್‌ಗೆ ಅತ್ಯವಶ್ಯಕವಾಗಿದ್ದ ಚೇತರಿಕೆ ನೀಡಲಿಕ್ಕಾಗಿ ಆ ಚಾನಲ್ ನಲ್ಲಿ ಈ ಬಾರಿ ಬಿಗ್ ಬಾಸ್ ಪ್ರಸಾರ ಮಾಡಲಾಗುತ್ತಿದೆ. ಭಾರಿ ಆಡಂಬರ ಮತ್ತು ಪ್ರಚಾರದೊಂದಿಗೆ ಕಲರ್ಸ್ ಸೂಪರ್ ಚಾನಲ್‌ ನಲ್ಲಿ ಪ್ರಾರಂಭವಾದ ಕನ್ನಡದ ಬಿಗ್ ಬಾಸ್, ಆರಂಭದಲ್ಲೇ ಅಂಥ ಹೆಚ್ಚಿನ ವೀಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಹೊಸಬರು ಮತ್ತು ಅಜ್ಞಾತರನ್ನು ಹಾಕಿಕೊಂಡು ಜನರನ್ನು ತಲುಪಲು ಹೋದ ಬಿಗ್ ಬಾಸ್ ಕಾರ್ಯಕ್ರಮ, ಮೂರನೇ ವಾರದಲ್ಲೇ ಮುಗ್ಗರಿಸುತ್ತಿರುವುದು ಸ್ಪಷ್ಟವಾಗಿದೆ. 3ನೇ ವಾರ ಕೇವಲ 2.7 ಟಿ.ಆರ್‌.ಪಿ ಗಳಿಸಿ ಕೆಳಕ್ಕಿಳಿದಿರುವುದು ಮಾತ್ರವಲ್ಲದೆ, ಸೂಪರ್ ಚಾನಲ್ ಅನ್ನು, ಮೊದಲಿದ್ದ ಸ್ಥಿತಿಗೇ ತೆಗೆದುಕೊಂಡು ಹೋಗಿದೆ. ಇನ್ನೂಕೂಡ, ಜನ ಕಲರ್ಸ್‌ ಕನ್ನಡವನ್ನೇ ವೀಕ್ಷಿಸುತ್ತಿದ್ದಾರೆ ಎನ್ನುವುದನ್ನು ಸಾಬೀತುಮಾಡುವಂತೆ, ಕಲರ್ಸ್ ಕನ್ನಡಕ್ಕೆ 700ಕ್ಕೂ ಹೆಚ್ಚು ಪಾಯಿಂಟ್ ಟಿಆರ್‌ಪಿ ದಕ್ಕಿದೆ. ಇದರಿಂದ, ವೀಕ್ಷಕರು ಬಿಗ್‌ ಬಾಸ್ ಅನ್ನು, ಸೂಪರ್ ಚಾನಲ್‌ನಲ್ಲಿ ತಿರಸ್ಕರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಅದೇರೀತಿಯಲ್ಲಿ, ಸುದೀಪ್ ಜನಪ್ರಿಯತೆ ಏನೂ ಕೆಲಸ ಮಾಡುತ್ತಿಲ್ಲ ಎಂಬುದೂ ಕೂಡ ಇದರಿಂದ ದೃಢಪಟ್ಟಿದೆ. ನಾವು ಆರಂಭದಲ್ಲೇ ಹೇಳಿದಂತೆ, ಈಗಲಾದರೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಏನಾದರೂ ಅವಶ್ಯಕ ಮಾರ್ಪಾಟುಗಳನ್ನು ಮಾಡುವ ಮೂಲಕ, ಜನಪ್ರಿಯತೆ ಹೆಚ್ಚಾಗುವಂತೆ ಮಾಡದಿದ್ದರೆ, ಚಾನಲ್‌ ನಲ್ಲಿನ ಕೆಲವು ಜವಾಬ್ದಾರಿಯುತ ವ್ಯಕ್ತಿಗಳ ತಲೆ ದಂಡವೂ ಆಗಬಹುದೆಂದು ಹೇಳಲಾಗುತ್ತಿದೆ.

 ಸಂಬಂಧಿತ ಟ್ಯಾಗ್ಗಳು

Kannada News Karnataka ಬಿಗ್ ಬಾಸ್ ಕಲರ್ಸ್ ಸೂಪರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ