‘ಬ್ರಾಹ್ಮಣ’ ನ್ಯೂಸ್ ಚಾನಲ್…

Kannada News

28-10-2017 1027

ಕರ್ನಾಟಕದಲ್ಲಿ ನ್ಯೂಸ್ ಚಾನಲ್ ಗಳ ಸಂಖ್ಯೆ ಈಗಾಗಲೇ ಒಂದು ಡಜನ್ ದಾಟಿ ಮುಂದಕ್ಕೆ ಹೋಗಿದೆ. ಇತ್ತೀಚೆಗಷ್ಟೇ ಟಿವಿ5 ಆರಂಭವಾಗಿದ್ದು, ಸದ್ಯದಲ್ಲೇ ಪವರ್ ಕನ್ನಡ, ಟಿವಿ1 ನ್ಯೂಸ್ ಚಾನಲ್‌ ಗಳು ಕನ್ನಡಿಗರ ಮನೆ ತಲುಪಲಿವೆ. ಈ ನಡುವೆ ಬ್ರಾಹ್ಮಣರೇ ಹಣ ಹೂಡಿಕೆ ಮಾಡಿ, ಬ್ರಾಹ್ಮಣ ಸಮುದಾಯದವರನ್ನೇ ಉದ್ಯೋಗಿಗಳಾಗಿ ನೇಮಿಸಿಕೊಂಡು ಒಂದು ಹೊಸ ಚಾನಲ್ ಆರಂಭಿಸುತ್ತಿರುವ ಮಾಹಿತಿ ಬಂದಿದೆ. ಇಂದ್ರ ಧನುಶ್ ಹೆಸರಿನ ನ್ಯೂಸ್ ಚಾನಲ್ ಗಾಗಿ ಬ್ರಾಹ್ಮಣ ಆಂಕರ್‌ಗಳು, ವರದಿಗಾರರು ಮತ್ತು ಇತರೆ ಸಿಬ್ಬಂದಿ ಬೇಕೆಂಬ ಪ್ರಕಟಣೆ ನಿಮ್ಮ ಸೂಪರ್ ಸುದ್ದಿಗೆ ತಲುಪಿದೆ. ಹಲವು ಚಾನಲ್‌ ಗಳಲ್ಲಿ, ಪತ್ರಿಕೆಗಳಲ್ಲಿ ಒಂದು ಸಮುದಾಯದ ಜನರಿಗೆ, ಒಂದು ಭಾಷೆಯ ಜನರಿಗೆ ಅನಗತ್ಯ ಆದ್ಯತೆ ಸಿಗುವ ಬಗ್ಗೆ ಮತ್ತು ಅದರಿಂದ ಇತರರ ಮೇಲಾಗುವ ಪರಿಣಾಮಗಳ ಬಗ್ಗೆ ಕೇಳಿದ್ದೇವೆ. ಆದರೆ, ಸುಮಾರು 250 ಜನರ ವರೆಗೆ ಉದ್ಯೋಗಿಗಳ ಅಗತ್ಯವಿರುವ ಒಂದು ನ್ಯೂಸ್ ಚಾನಲ್‌ ನ ಎಲ್ಲಾ ಉದ್ಯೋಗಿಗಳನ್ನು, ಜಾತಿ ಆಧರಿಸಿ ಆಯ್ಕೆ ಮಾಡಿಕೊಳ್ಳುವ ಈ ‘ಆಧುನಿಕ ವಿಪ್ರ ಸಂಪ್ರದಾಯ’ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಂಡು ಬರುತ್ತಿದೆ ಎಂದು ಹೇಳಬಹುದು. ಇದೇ ಟ್ರೆಂಡ್ ಮುಂದುವರಿದರೆ ‘ಜಾತ್ಯತೀತ ಭಾರತ’ದಲ್ಲಿ ಏನೆಲ್ಲಾ ಆಗಬಹುದೋ.?
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Viagra Ultime Notizie Donuncoork [url=https://asocialiser.com/]cialis 10mg[/url] SminyDum Sildenafil 100mg India daycle Cialis Urineedido Kamagra Wiki Nederlands
  • buying cialis online forum
  • Internet, new