ಅಂಬಿ ಈಗ ಅಷ್ಟೇನೂ ರೆಬೆಲ್ ಅಲ್ಲ…!

Kannada News

21-10-2017 321

ಈ ಹಿಂದೆ, ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಮತ್ತು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅಂಬರೀಶ್ ಅವರು, ಸಚಿವರಾಗಿ ಹೆಚ್ಚು ಜವಾಬ್ದಾರಿಯುತರಾಗಿ ನಡೆದುಕೊಳ್ಳಲಿಲ್ಲ ಅನ್ನುವ ಮಾತುಗಳೂ ಕೇಳಿಬಂದು, ಅವರು ಮಾಜಿ ಸಚಿವರಾಗಿದ್ದು ಈಗ ಹಳೆಯ ಸುದ್ದಿ.

ಆದರೆ, ಇದೆಲ್ಲಾ ಆದ ನಂತರ ಅಂಬರೀಶ್ ಅವರು ಸಾಕಷ್ಟು ಬದಲಾಗಿದ್ದಾರೆ. ಅವರ ಕೇರ್‌ ಲೆಸ್ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ಅವರು ಮದ್ಯ ಸೇವನೆಯನ್ನೂ ತೀರಾ ಕಡಿಮೆ ಅನ್ನುವಷ್ಟರ ಮಟ್ಟಿಗೆ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರಂತೆ. ಇದರ ಜೊತೆಗೆ, ಅವರು ಬಳಕೆ ಮಾಡುತ್ತಿದ್ದ ಭಾಷೆಯಲ್ಲೂ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಇದೀಗ ಅವರ ಮಾತಿನಲ್ಲಿ ತೂಕ ಕಂಡುಬರುತ್ತಿದೆ ಅನ್ನುವುದು ಇತ್ತೀಚಿನ ಸುದ್ದಿ.

 

 ಸಂಬಂಧಿತ ಟ್ಯಾಗ್ಗಳು

Kannada News Karnataka ರೆಬೆಲ್ ಸ್ಟಾರ್ ಅಂಬರೀಶ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ