ಇನ್ನೂ 20 ನ್ಯೂಸ್ ಚಾನಲ್ ಗಳು!!

16-10-2017 661
ತಿಂಗಳಿಗೆ ಎರಡು ನ್ಯೂಸ್ ಚಾನಲ್!! ಏನಿದು ಅಂತ ಯೋಚನೆ ಮಾಡ್ತಾ ಇದ್ದೀರಾ? ಹೌದು, ಕನ್ನಡದಲ್ಲಿ ನ್ಯೂಸ್ ಚಾನಲ್ ಗಳು ಆರಂಭವಾಗುತ್ತಿರುವ ರೀತಿಯನ್ನು ನೋಡಿದರೆ ಮತ್ತು ಲಭ್ಯವಿರುವ ಮಾಹಿತಿಯನ್ನು ಪರಿಗಣಿಸಿದರೆ ಇನ್ನು ಒಂದು ವರ್ಷದಲ್ಲಿ ತಿಂಗಳಿಗೆ ಎರಡು ನ್ಯೂಸ್ ಚಾನಲ್ ಗಳು ಆರಂಭವಾಗುವ ಎಲ್ಲಾ ಸಾಧ್ಯತೆ ಇದೆ. ಲಾಭ ಇದೆಯೋ ಇಲ್ಲವೊ ನ್ಯೂಸ್ ಚಾನಲ್ ಬಿಸಿನೆಸ್ ನೋಡೇ ಬಿಡೋಣ ಎನ್ನುವಂತೆ ಈ ಪ್ರಯತ್ನಗಳಿಗೆ ಹಣ ಹಾಕುತ್ತಿರುವವರನ್ನು ನೋಡಿದರೆ ಇನ್ನು ಒಂದು ವರ್ಷದಲ್ಲಿ ಸುಮಾರು ಇಪ್ಪತ್ತಾದ್ರು ಹೊಸ ನ್ಯೂಸ್ ಚಾನಲ್ಗಳು ಅಸ್ತಿತ್ವಕ್ಕೆ ಬರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಒಂದು ದೊಡ್ಡ ಸಿನೆಮಾಕ್ಕೋ ಇಲ್ಲ ಬಿಸಿನೆಸ್ ಗೋ ದುಡ್ಡು ಹಾಕಿ ಕೈ ಸುಟ್ಟು ಕೊಳ್ಳುವ ಬದಲು ನ್ಯೂಸ್ ಚಾನಲ್ ಇದ್ದರೆ ಒಂದಷ್ಟು ಪ್ರಭಾವವನ್ನು ಬೆಳೆಸಿಕೊಂಡು ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಬೆದರಿಸಬಹುದು ಹಾಗೇ ಅನೇಕ ರೀತಿಯಲ್ಲಿ ಹಣ ಮಾಡಬಹುದು ಎಂಬ ಭ್ರಮೆಯೊಂದಿಗೆ ಅನೇಕ ಮಂದಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇವೆಲ್ಲದರ ಮಧ್ಯೆ ಕೆಲವು ಒಳ್ಳೆಯ ಚಾನಲ್ಗಳೂ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ, ಮತ್ತು ಈಗಿರುವ ಚಾನಲ್ ಗಳಿಗೆ ಅವು ಉತ್ತಮ ಸ್ಪರ್ಧೆಯನ್ನು ನೀಡಬಹುದು ಎಂದು ಊಹಿಸಲಾಗುತ್ತಿದೆ. ಅಂಗಡಿ ತೆರೆದಂತೆ ನ್ಯೂಸ್ ಚಾನಲ್ಗಳನ್ನ ತೆರೆಯುತ್ತಿರುವುದನ್ನ ನೋಡಿದರೆ ಕನ್ನಡ ನ್ಯೂಸ್ ಚಾನಲ್ ಗಳ ಗುಣಮಟ್ಟ ಮುಂಬರುವ ದಿನಗಳಲ್ಲಿ ಹೇಗಿರಬಹುದೆಂದು ಯಾರು ಕೂಡ ಊಹಿಸಬಹುದು.
ಒಂದು ಕಮೆಂಟನ್ನು ಹಾಕಿ