ಪ್ರಥಮ್ ನ ಕಾಸ್ಟ್ಯೂಮ್ ಕಿರಿಕ್ !

14-10-2017 450
ಕಳೆದ ಬಿಗ್ ಬಾಸ್ ನಲ್ಲಿ ಗೆದ್ದು ನಾನಾ ವಿಚಾರಗಳಿಂದ ಸುದ್ದಿಯಾಗಿರುವ ಪ್ರಥಮ್, ಈಗ ಸಿನಿಮಾ ಸಹ ನಿರ್ದೇಶಕನಿಗೆ ಅಪರಾತಪರಾ ಮಾತಾಡಿರುವ ಆರೋಪಕ್ಕೆ ಸಿಲುಕಿದ್ದಾರೆ.
ಎಂಎಲ್ಎ ಎಂಬ ಸಿನಿಮಾದ ಹಾಡಿನ ಚಿತ್ರೀಕರಣ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯುತ್ತಿದ್ದು, ನಿನ್ನೆ ಸೆಟ್ ನಲ್ಲಿ ಕಾಸ್ಟ್ಯೂಮ್ ಬಗ್ಗೆ ಕಿರಿಕ್ ಮಾಡಿಕೊಂಡು, ಚಿತ್ರೀಕರಣದಲ್ಲಿ ಪಾಲ್ಗೊಳ್ಳದೆ ಹೋಗಿದ್ದರಿಂದ ಆತನನ್ನ ಸಹ ನಿರ್ದೇಶಕ ರಾಮಚಂದ್ರ ಕೈಹಿಡಿದು ಎಳೆದು ಕೊಂಡು ವಾಪಸ್ಸು ಕರೆತಂದಿದ್ದಾರೆ. ಆಗ ರಾಮಚಂದ್ರನ ಬಗ್ಗೆ ಅಸಭ್ಯ ಪದಗಳನ್ನು ಬಳಸಿರುವ ಪ್ರಥಮ್, ಮಾರನೇ ದಿನ ಕೂಡ ಈ ಸಹ ನಿರ್ದೇಶಕನಿದ್ದರೆ ಸಿನಿಮಾದಲ್ಲಿ ನಟಿಸಲ್ಲ ಎಂದು ಪಟ್ಟು ಹಿಡಿದು, ಕೊನೆಗೂ ಆತನನ್ನ ಓಡಿಸುವಲ್ಲಿ ಯಶಸ್ಸಾಗಿದ್ದಾನೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಆಗಿ ಮಾತಾಡಿರುವ ರಾಮಚಂದ್ರ, ‘ಪ್ರಥಮ್ ಗೋಮುಖವ್ಯಾಘ್ರ, ಈತ ಸೆಟ್ ನಲ್ಲಿ ದುರಂಕಾರದಿಂದ ವರ್ತಿಸುತ್ತಾನೆ, ತನ್ನದೇ ಡೈಲಾಗ್ ಹೇಳುತ್ತಾನೆ, ಇಂಥವನನ್ನು ಯಾರೂ ಸಿನಿಮಾಗೆ ಹಾಕಿಕೊಳ್ಳಬೇಡಿ, ಬಿಗ್ ಬಾಸ್ ನಲ್ಲಿ ಇವನನ್ನ ಗೆಲ್ಲಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ’.
ಪ್ರಥಮ್ ಗೆ ಸಿನಿಮಾಕ್ಕಿಂತ ತನ್ನ ಪ್ರಚಾರ ಮಾಡಿಕೊಳ್ಳುವ ಗೀಳೇ ಜಾಸ್ತಿ, ಅವನನ್ನು ಸಿನಿಮಾಗೆ ತೆಗೆದುಕೊಳ್ಳುವ ಮುನ್ನ ಹತ್ತಾರು ಸಲ ಯೋಚಿಸಿ ಎಂದು, ಸಹ ನಿರ್ದೇಶಕ ಹೇಳಿಕೊಂಡಿದ್ದಾರೆ.
ವರದಿ: ಜಿ.ಆರ್.ಸತ್ಯಲಿಂಗರಾಜು
ಒಂದು ಕಮೆಂಟನ್ನು ಹಾಕಿ