ಧೋನಿ ಸ್ಪೀಡ್ ಎಷ್ಟು ಗೊತ್ತಾ..?

Kannada News

13-10-2017 1054

ನಮ್ಮ ಮಾಹಿ ಗೊತ್ತಲ್ಲಾ ನಿಮಗೆ..? ಮಾಹಿ ಅಲಿಯಾಸ್ ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ಮಾಜಿ ನಾಯಕ, 36ರ ಹರೆಯದ ಈ ವ್ಯಕ್ತಿ ಮೇಂಟೇನ್ ಮಾಡೋ ಫಿಟ್‌ನೆಸ್ಸು, 18ರ ಹುಡುಗರನ್ನೂ ನಾಚಿಸುತ್ತೆ.

ಕಳೆದ 13 ವರ್ಷಗಳಿಂದಲೂ ಟೀಮ್ ಇಂಡಿಯಾದ ಕೀಪರ್ ಜೊತೆಗೆ, ಆಪದ್ಬಾಂಧವ ಅನ್ನಿಸಿಕೊಳ್ಳೋ ಬ್ಯಾಟ್ಸ್‌ಮನ್ ಕೂಡ ಆಗಿರೋ ಧೋನಿ, ಭಾರತಕ್ಕೆ ಎರಡನೇ ಬಾರಿ ವಿಶ್ವಕಪ್ ತಂದುಕೊಟ್ಟ ಕ್ಯಾಪ್ಟನ್ ಆಗಿ ಮಿಂಚಿದ್ದಾರೆ. ಆದರೆ, ಇವತ್ತಿಗೂ ಅದ್ಭುತವಾದ ಫಿಟ್‌ನೆಸ್ ಮೇಂಟೇನ್ ಮಾಡಿರೋ ಧೋನಿ ಆಟ, ಇನ್ನೂ ಮುಗಿದಿಲ್ಲ. ಮೊನ್ನೆತಾನೆ ಆಸ್ಟ್ರೇಲಿಯಾದ ವಿರುದ್ಧ ಎರಡನೇ ಟಿ20 ಮ್ಯಾಚ್‌ನಲ್ಲಿ ಭಾರತದೋರು ಸೋತ್ರು, ಆದರೆ ಅಲ್ಲೂ ಕೂಡ ಧೋನಿ ಒಂದು ಹೊಸ ರೆಕಾರ್ಡ್ ಮಾಡಿದ್ದಾರೆ. ಏನು ರೆಕಾರ್ಡು ಅಂತೀರಾ? ಇದೊಂಥರ ಹೊಸ ದಾಖಲೆ. ಮೊನ್ನೆ ಧೋನಿ ಬ್ಯಾಟಿಂಗ್ ಆಡ್ತಿದ್ದಾಗ, ಎರಡು ರನ್ ತೊಗೋಳಕ್ಕೆ ತುಂಬಾ ಜೋರಾಗಿ ಓಡಿದ್ರಂತೆ, ಹೌದು ಧೋನಿ ಓಡಿದ್ದು ಗಂಟೆಗೆ 31 ಕಿಲೋಮೀಟರ್ ಸ್ಪೀಡಿನಲ್ಲಿ. ಸುಲಭ ಅಲ್ಲ ಸ್ವಾಮಿ ಇದು. ನೂರು ಮೀಟರ್ ಓಟದಲ್ಲಿ ವಿಶ್ವದಾಖಲೆ ಮಾಡಿರೋ ಉಸೇನ್ ಬೋಲ್ಟ್ ಅಂಥೋರು ಓಡೋ ಸ್ಪೀಡು, ಗಂಟೆಗೆ ಸುಮಾರು 36 ಕಿಲೋಮೀಟರ್ ಅಂತೆ. ಹೀಗಿರೋವಾಗ ಎರಡು ವಿಕೆಟ್ ಮಧ್ಯೆ ಇಷ್ಟೊಂದು ಸ್ಪೀಡ್‌ನಲ್ಲಿ ಓಡೋ ಧೋನಿಗೆ ಶಹಬ್ಬಾಸ್ ಅನ್ನಲೇ ಬೇಕು ಅಲ್ಲವೇ..
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ