ಸತ್ಯ ಗೊತ್ತಾಗದ ದಸರಾ !

Kannada News

27-09-2017 782

ಮೈಸೂರಲ್ಲಿ ಇದೀಗ ವಿಜೃಂಭಣೆಯಿಂದ ದಸರಾ ನಡೆಯುತ್ತಿವೆ. ದಿಕ್ಕೊಂದರಂತೆ ವಿಶೇಷ ಕಾರ್ಯಕ್ರಮಗಳ ಮೂಲಕ ದೇಶ-ವಿದೇಶಿಗರನ್ನು ಆಕರ್ಷಿಸುತ್ತಿದೆ. ಆದರೆ ಮೈಸೂರಿಗೂ ಮುನ್ನ ಶ್ರೀರಂಗಪಟ್ಟಣದಲ್ಲೂ ದಸರಾ ನಡೆಯುತ್ತಿತ್ತು ಎಂಬ ಇತಿಹಾಸವಿದ್ದು, ಅದನ್ನ ನೆನಪಿಸಿಕೊಳ್ಳಲು ದಸರಾ ಮಂಟಪದ ಬಳಿ ಇದನ್ನ ಆಚರಿಸಲಾಗುತ್ತಿದೆ.

ಆದರೆ ಶ್ರೀರಂಗಪಟ್ಟಣ ಇದ್ದುದು ನಡು ನೀರಿನಲ್ಲಿ,  ಈಗೇನೋ ಸೇತುವೆಗಳಿವೆ ನದಿ ದಾಟಿಕೊಂಡು ಮೈಸೂರು-ಬೆಂಗಳೂರು ರಸ್ತೆ ಸಂಚಾರ ನಡೆಯುತ್ತಿದೆ. ಆದರೆ ಆಗ ಸೇತುವೆ ಇರಲಿಲ್ಲ. ಆದರೂ  ಶ್ರೀರಂಗಪಟ್ಟಣದಿಂದ ಹೊಳೆಯಾಚೆಗಿರುವ ದಸರಾ ಮಂಟಪದಿಂದ ದಸರಾ ಮೆರವಣಿಗೆ ಬರುತ್ತಿತ್ತು-ಹೋಗುತ್ತಿತ್ತು ಎಂದೇಳಲಾಗುತ್ತಿದ್ದರೂ, ನದಿಯನ್ನ ಹೇಗೆ ದಾಟಿಕೊಂಡು ಮೆರವಣಿಗೆ ಹೋಗುತ್ತಿತ್ತು ಎಂಬುದಕ್ಕೆ ಉತ್ತರಗಳಿಲ್ಲ.

ದಸರಾ ಮಂಟಪದಿಂದಲ್ಲ, ಈಗಿನ ದರಿಯಾ ದೌಲತ್ ಕಡೆಯಿಂದ ಶ್ರೀರಂಗಪಟ್ಟಣದ ಕೋಟೆಯೊಳಕ್ಕೆ ದಸರಾ ಹೋಗಿ ಬರುತ್ತಿತ್ತು ಎಂಬ ಇನ್ನೊಂದು ಮಾತಿದ್ದರೂ, ಪಟ್ಟಣದ ಕೋಟೆ ಬಾಗಿಲು ಆನೆ ಹೋಗುವಷ್ಟು ಎತ್ತರವಿರಲಿಲ್ಲ, (ಆನಂತರದಲ್ಲಿ ಆನೆ ಬಾಗಿಲು ಕಟ್ಟಲಾಗಿದೆ) ಇದರಿಂದಾಗಿ ರಾಜ ಅರಮನೆಯಿಂದ ಕೋಟೆವರೆಗೆ ಕುದುರೆ ಮೇಲೆ ಬಂದು, ಕೋಟೆಯಿಂದಾಚೆಗೆ ಆನೆಯನ್ನೇರಿ ದಸರಾ ಮೆರವಣಿಗೆ ಹೊರಡುತ್ತಿದ್ದರೇ ಎಂಬ ಅಂಶಗಳು ಕೂಡ ಇಂದಿಗೂ ಸ್ಪಷ್ಟವಾಗಿಲ್ಲ. ಹೀಗಿದ್ದರೂ, ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತಿತ್ತು ಎಂಬ ಕಾರಣದಿಂದಾಗಿಯೇ, ಸ್ಥಳದ ಇತಿಹಾಸದ ಖಚಿತತೆ ಇಲ್ಲದಿದ್ದರೂ, ಇಲ್ಲಿ ದಸರಾ ನಡೆಸಲಾಗುತ್ತಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜುಸಂಬಂಧಿತ ಟ್ಯಾಗ್ಗಳು

ಸತ್ಯ ಗೊತ್ತಾಗದ ದಸರ ! ದಸರ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ