ಸಕ್ಕರೆ ಖರೀದಿಸುತ್ತಿದ್ದೀರ ಹಾಗಾದರೆ ಎಚ್ಚರ !01-06-2017 247


ಹಾಸನ:- ಚೀನಾದ ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟ ಪ್ರಕರಣಗಳು ಆಗಾಗ ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ, ಇದೀಗ ಪ್ಲಾಸ್ಟಿಕ್ ಸಕ್ಕರೆ ಮಾರಾಟ ಜನರಲ್ಲಿ ಆತಂಕ  ಮೂಡಿಸಿದೆ. ಹಾಸನದ ದಿನಸಿ ಅಂಗಡಿಗಳಲ್ಲಿ  ಚೀನಾದ ಪ್ಲಾಸ್ಟಿಕ್ ಸಕ್ಕರೆ ವಹಿವಾಟು ಎಗ್ಗಿಲ್ಲದೇ ನಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಹಕರೊಬ್ಬರು ಸಕ್ಕರೆ ಖರೀದಿಸಿದ ವೇಳೆ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದೆ. ಹಾಸನದ ಹಳೇ ಬಸ್ ನಿಲ್ದಾಣ ಸಮೀಪದ ಪ್ರಾವಿಷನ್ ಸ್ಟೋರ್ ನಲ್ಲಿ ಪ್ಲಾಸ್ಟಿಕ್ ಸಕ್ಕರೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಶಿವಕುಮಾರ್ ಎಂಬುವರು ಸಕ್ಕರೆ ಖರೀದಿಸಿದ್ದರು ನಂತರ ಮನೆಯಲ್ಲಿ ಟೀ ಮತ್ತು ಕಾಫಿ ತಯಾರಿಸಿದಾಗ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದೆ. ಟೀ ತಯಾರಿಸಿದಾಗ ಅಸಲಿ ಸಕ್ಕರೆ ಕರಗಿದೆ ಆದರೆ ಪ್ಲಾಸ್ಟಿಕ್ ಸಕ್ಕರೆ ಶಾಖಕ್ಕೂ ಕರಗದೇ ಪಾತ್ರೆಯ ತಳಭಾಗದಲ್ಲಿ ಪತ್ತೆಯಾಗಿದೆ. ಜೀವಕ್ಕೆ ಕುತ್ತು ತರುವ ಪ್ಲಾಸ್ಟಿಕ್ ಸಕ್ಕರೆ ಎಗ್ಗಿಲ್ಲದೇ ಮಾರಾಟವಾಗಿತ್ತಿದೆ. ಚೀನಾದ ಪ್ಲಾಸ್ಟಿಕ್ ಸಕ್ಕರೆ ಹಾಸನಕ್ಕೂ ಎಂಟ್ರಿ ಕೊಟ್ಟಿರುವುದು ಆತಂಕ ಮೂಡಿಸಿದೆ. ಅಲ್ಲದೆ ಸಕ್ಕರೆ ಖರೀದಿಸುವಾಗ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.