ಮೂತ್ರ ವಿಸರ್ಜನೆಗೆ ಹೋದ ಗಾರ್ಮೆಂಟ್ಸ್ ನೌಕರನ ಸಾವು !31-05-2017 446

ಬೆಂಗಳೂರು:- ಮೂತ್ರ ವಿಸರ್ಜನೆಗೆ ಹೋದ ಗಾರ್ಮೆಂಟ್ಸ್ ನೌಕರನೊಬ್ಬ ಆಯತಪ್ಪಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದುರ್ಘಟನೆ ಬೊಮ್ಮನಹಳ್ಳಿಯ ಇಟಿನಾ ಅಪಾರ್ಟ್‍ಮೆಂಟ್ ಬಳಿ ಮಂಗಳವಾರ ರಾತ್ರಿ ನಡೆದಿದೆ. ಒಡಿಸ್ಸಾದ ರಾಯಘಡ್ ಜಿಲ್ಲೆಯ ಹನುಮಂತಪುರ ಮೂಲದ ಹಾರಿಂಗ್ ಸರಕ್(20)ಮೃತಪಟ್ಟ ನೌಕರನಾಗಿದ್ದಾನೆ, ಊರಿಗೆ ಹೋಗಿ ಎರಡು ದಿನಗಳ ಹಿಂದಷ್ಟೇ ಚಿಕ್ಕಪ್ಪನ ಮಗನನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಸರಕ್ ಇಟಿನಾ ಅಪಾರ್ಟ್‍ಮೆಂಟ್ ಬಳಿ ಅಮ್ಜದ್ ಬಿಲ್ಡಿಂಗ್‍ನ ಎರಡನೇ ಮಹಡಿಯಲ್ಲಿ ಉಳಿದುಕೊಂಡಿದ್ದರು. ರಾತ್ರಿ 10ರ ವೇಳೆ ಮೂತ್ರ ವಿಸರ್ಜನೆಗೆ ಪಕ್ಕದಲ್ಲೇ ಇದ್ದ ಶೌಚಾಲಯಕ್ಕೆ ಹೋಗಿದ್ದು ಎರಡು ಮೆಟ್ಟಿಲುಗಳನ್ನು ಹತ್ತುವಾಗ ಆಯತಪ್ಪಿ ಹಿಂಭಾಗಕ್ಕೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಜೊತೆಯಲ್ಲಿನ ಕೆಲಸಗಾರರು ಬೆಳಿಗ್ಗೆ 6 ರವೇಳೆ ಬಂದು ನೋಡಿದಾಗ ಸರಕ್ ಮೃತಪಟ್ಟಿದ್ದರು, ಹತ್ತಿರದ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸರಕ್‍ಗೆ ಅಮ್ಜದ್ ಬಿಲ್ಠಿಂಗ್‍ನಲ್ಲಿ ಉಳಿದುಕೊಳ್ಳಲು ಗಾರ್ಮೆಂಟ್ಸ್ ನವರು ವ್ಯವಸ್ಥೆ ಮಾಡಿಕೊಟ್ಟಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.