ಶೋಭಾ ಕರಂದ್ಲಾಜೆ ಆಹಾರ ಇಲಾಖೆ ಸಚಿವರಾಗಿದ್ದ ವೇಳೆಯೇ ಸಾಕಷ್ಟು ಹಗರಣ ನಡೆದಿದೆ !24-05-2017 218

ಐ ಎ ಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಪ್ರಕರಣ ಇದೀಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ.
ಅನುರಾಗ್ ತಿವಾರಿ ಸಾವು ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳು ಹಾಗು ಸಚಿವ್ರು ಭಾಗಿಯಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ವಿಚಾರಕ್ಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಶೋಭಾ ಕರಂದ್ಲಾಜೆ ಅವರು ರೀತಿ ಹೇಳಿಕೆ ನೀಡಿ ಪ್ರಚಾರ ಪಡೆದುಕೊಳ್ಳುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ರೀತಿಯ ಆರೋಪ ಮಾಡುವುದು ಅವರಿಗೆ ತರವಲ್ಲ.
ಆರೋಪ ಮಾಡಿ ಪತ್ರಿಕೆ ಹಾಗು ಟಿವಿಯಲ್ಲಿ ಸದಾ ಸುದ್ದಿಯಲ್ಲಿರಬೇಕೆಂಬುದನ್ನು ಅವರು ರೂಢಿ ಮಾಡಿಕೊಂಡಿದ್ದಾರೆ. ಈ ಹಿಂದೆ ಸಚಿವ ರೋಷನ್ ಬೇಗ್ ಮೇಲೆ ಇದೇ ರೀತಿ ಕೊಲೆ ಪ್ರಕರಣದಲ್ಲಿ ಆರೋಪ ಮಾಡಿದ್ದರು.ಅಲ್ಲದೆ ನಾವು ಅನುರಾಗ್ ತಿವಾರಿ ಸಾವು ಪ್ರಕರಣಕಕ್ಕೆ ಈಗಾಗಲೇ ಸಿಬಿಐ ತನಿಖೆಯನ್ನು ಸ್ವಾಗತ ಮಾಡಿದ್ದೇವೆ. ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಅಲ್ಲದೆ ಶೋಭಾ ಕರಂದ್ಲಾಜೆ ಆಹಾರ ಇಲಾಖೆ ಸಚಿವರಾಗಿದ್ದ ವೇಳೆಯೇ ಸಾಕಷ್ಟು ಹಗರಣ ನಡೆದಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಅವರ ಆರೋಪವನ್ನ ಗಂಭೀರವಾಗಿ ತಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪ್ರತಕ್ರಿಯಿಸಿದ್ದಾರೆ.