ಐಎಸ್ಐ ಹೆಲ್ಮೆಟ್ ಇಲ್ಲದವರಿಗೆ ಕಹಿ ಸುದ್ದಿ03-01-2018 283

ಬೆಂಗಳೂರು: ಸ್ಟ್ಯಾಂಡರ್ಡ್ ಹೆಲ್ಮೆಟ್ ಬಳಸದ ಬೈಕ್ ಸವಾರರಿಗೆ ಸಂಚಾರಿ ಪೊಲೀಸರು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಸ್ಟ್ಯಾಂಡರ್ಡ್ ಹೆಲ್ಮೆಟ್ ಬಳಸಲು ಒಂದು ತಿಂಗಳ ಗಡುವು ನೀಡಿದ್ದು, ಜನವರಿ 31ರ ಕೊನೆ ದಿನವಾಗಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಯಮಾವಳಿಗನುಸಾರ ಹೆಲ್ಮೆಟ್ ಬಳಕೆಗೆ ಸೂಚನೆ ನೀಡಿದ್ದಾರೆ. ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಗಳನ್ನೇ ‌ಬಳಸಲು ಸೂಚಿಸಿದ್ದು, ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಯಮಾವಳಿ ಇರೋ ಹಾಫ್ ಹೆಲ್ಮೆಟ್ ಬಳಸಬಹುದು ಎಂದು ಹೇಳಿದ್ದಾರೆ. ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಹೆಲ್ಮೆಟ್ ಸುರಕ್ಷಿತ, ಈ ಸ್ಟ್ಯಾಂಡರ್ಡ್ ನ ನಿಯಮದ ಪ್ರಕಾರ ಹೆಲ್ಮೆಟ್ ಬಳಕೆ ಮಾಡಬೇಕು, ವಾಹನ ಸವಾರರು ಹಾಗೂ ಹಿಂಬದಿ ಸವಾರ ತಲೆಸಂಪೂರ್ಣವಾಗಿ ಮುಚ್ಚಿರಬೇಕು, ವಾಹನಗಳಲ್ಲಿ ಹೆಲ್ಮೆಟ್ ನ ಸೇಫ್ಟಿ ಲಾಕ್ ಕಡ್ಡಾಯವಾಗಿ ಹಾಕಿರಬೇಕು ಎಂದು, ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಅವರು, ಗೃಹ ಸಚಿವರ ಜೊತೆಗಿನ ಚರ್ಚೆ ಬಳಿಕ‌ ಈ ಮಾತುಗಳನ್ನು ಹೇಳಿದ್ದಾರೆ.

 


ಒಂದು ಕಮೆಂಟನ್ನು ಬಿಡಿ