ಸರ್ಕಾರಿ ಆಸ್ಪತ್ರೆಗಳತ್ತ ರೋಗಿಗಳು02-01-2018 182

ತುಮಕೂರು: ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ ಹಿನ್ನೆಲೆ, ತುಮಕೂರಿನಲ್ಲಿ ಬಹುತೇಕ ಸ್ಪತ್ರೆಗಳು ಖಾಲಿ ಹೊಡೆಯುತ್ತಿವೆ. ವೈದ್ಯರು, ರೋಗಿಗಳಿಲ್ಲದೆ ಬಣಗುಡುತ್ತಿವೆ. ಆದರೆ ಒಳ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗದಂತೆ ಖಾಸಗಿ ಆಸ್ಪತ್ರೆಗಳು ಎಚ್ಚರ ವಹಿಸಿರುವುದಾಗಿ ತಿಳಿಸಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಮುಷ್ಕರದ ಬಗ್ಗೆ ಆಸ್ಪತ್ರೆ ಸಿಬ್ಬಂದಿ ನೋಟಿಸ್ ಅಂಟಿಸಿವೆ. ಇನ್ನು ರೋಗಿಗಳಿಗೆ ತೊಂದರೆ ಆಗದಂತೆ ತುಮಕೂರು ಜಿಲ್ಲಾಡಳಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಕ್ರಮ ಕೈಗೊಂಡಿವೆ ಎಂದು ತಿಳಿಸಿದೆ.

ಬಾಗಲಕೋಟೆಯಲ್ಲೂ ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ ಜೋರಾಗಿದ್ದು, ಬಾಗಲಕೋಟೆಯ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಕೇಂದ್ರ ವೈದ್ಯಕೀಯ ಆಯೋಗ ಸ್ಥಾಪನೆಗೆ ವಿರೋಧಿಸುತ್ತಿರುವುದಕ್ಕೆ ಬೆಂಬಲಿಸಿ ಸುಮಾರು 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದೆ. ಈ ಕುರಿತಂತೆ ಹೊರ ಮತ್ತು ಒಳರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲು ಜಿಲ್ಲಾ  ಆರೋಗ್ಯಾಧಿಕಾರಿ ಡಾ. ಅನಂತ್ ದೇಸಾಯಿ ಅವರು, ಸರ್ಕಾರಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.  

ಇನ್ನು ಮಂಡ್ಯದಲ್ಲಿಯೂ ಕೇಂದ್ರದ ವೈದ್ಯಕೀಯ ಆಯೋಗ ಮಸೂದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು, ಒಪಿಡಿ ಸೇವೆ ಸ್ಥಗಿತಗೊಳಿಸಿದ್ದಾರೆ. ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ, ಪ್ರಯೋಗಾಲಯ ಸೇರಿ ಕ್ಲಿನಿಕ್ ಗಳು ಕೂಡ ಬಂದ್ ಆಗಿವೆ. ಇದರಿಂದ ಮಂಡ್ಯದಲ್ಲಿ ಚಿಕಿತ್ಸೆಗಾಗಿ ಹೊರರೋಗಿಗಳು ಪರದಾಡುವಂತಾಗಿದೆ. ಅಲ್ಲದೇ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳತ್ತ ರೋಗಿಗಳು ಮುಖಮಾಡಿದ್ದಾರೆ.

ಗದಗದಲ್ಲಿಯೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಗದಗ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಗಿದೆ. ಗದಗ ನಗರದ ಮಹತ್ಮಾಗಾಂಧಿ, ಸಂಜೀವಿನಿ, ಭೂಸನೂರಮಠ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದು, ಬಂದ್ ಮಾಹಿತಿ ಇಲ್ಲದೇ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ವೈದ್ಯರ ಮುಷ್ಕರದಿಂದ ಖಾಸಗಿ ಆಸ್ಪತ್ರೆಗಳು ಬಿಕೋ ಎನ್ನುತ್ತಿವೆ.


ಒಂದು ಕಮೆಂಟನ್ನು ಬಿಡಿ