ದೇಗುಲವಾಗಿ ಬದಲಾಯ್ತು ಚರ್ಚ್…26-12-2017 667

ಒಂದು ಕಾಲದಲ್ಲಿ ಚರ್ಚ್ ಆಗಿದ್ದ ಕಟ್ಟಡ ಈಗ ದೇಗುಲವಾಗಿದೆ. ಇಲ್ಲ, ಇದರಲ್ಲಿ ಬಿಜೆಪಿಯವರದ್ದಾಗಲಿ, ವಿಶ್ವಹಿಂದೂ ಪರಿಷತ್ ನವರದ್ದಾಗಲಿ  ಕೈವಾಡವೇನೂ ಇಲ್ಲ. ಇದು ಸ್ವಾಮಿ ನಾರಾಯಣ್ ಪಂಥದವರು ಮಾಡಿರುವ ಕೆಲಸ. ಅವರೂ ಕೂಡ ಮಾಡಬಾರದ್ದೇನೂ ಮಾಡಿಲ್ಲ, ಹಳೆಯ ಚರ್ಚ್‌ ಅನ್ನು ಅದರ ಮಾಲೀಕರಿಂದ ಖರೀದಿಸಿ, ಸ್ವಾಮಿ ನಾರಾಯಣನ ದೇಗುಲವಾಗಿ ಬದಲಾಯಿಸಿದ್ದಾರೆ ಅಷ್ಟೇ. ಎಲ್ಲಪ್ಪ? ಈ ಚರ್ಚ್ ದೇಗುಲವಾಗಿರುವುದು ಅಂದ್ರೆ, ಅದು ಭಾರತದಲ್ಲಿ ಅಲ್ಲ, ಅಮೆರಿಕ ದೇಶದ ಡೆಲವೇರ್‌ನಲ್ಲಿ. ಈಗಾಗಲೇ ಕ್ಯಾಲಿಫೋರ್ನಿಯ ಮತ್ತು ಕೆಂಟಕಿಯಲ್ಲಿ ಎರಡು ಹಳೆಯ ಚರ್ಚ್‌ಗಳನ್ನು ಖರೀದಿಸಿದ್ದ ಸ್ವಾಮಿನಾರಾಯಣ ಗಡಿ ಸಂಸ್ಥಾನದವರು, ಅವುಗಳನ್ನು ದೇಗುಲಗಳಾಗಿಸಿದ್ದಾರೆ. ಇವಲ್ಲದೆ, ಇಂಗ್ಲೆಂಡ್ ದೇಶದ ಲಂಡನ್ ಮತ್ತು ಬೋಲ್ಟನ್ ನಗರಗಳಲ್ಲೂ ಎರಡು ಚರ್ಚ್‌ಗಳನ್ನು ದೇವಾಲಯಗಳಾಗಿ ಪರಿವರ್ತಿಸಲಾಗಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡ ದೇಶಗಳಲ್ಲಿ ಇನ್ನೂ ಹಲವಾರು ಆಸ್ತಿಗಳನ್ನು ಖರೀದಿಸಿರುವ ಸ್ವಾಮಿ ನಾರಾಯಣ್ ಸಂಸ್ಥಾನದವರು, ಅವುಗಳನ್ನೂ ದೇಗುಲಗಳಾಗಿಸುವ ಕೆಲಸ ಮಾಡುತ್ತಿದ್ದಾರಂತೆ.

ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ನೆಲೆಸಿರುವ ಸ್ವಾಮಿ ನಾರಾಯಣನ ಭಕ್ತರು ಮತ್ತು ಹಿಂದೂ ಧರ್ಮವನ್ನು ಅನುಸರಿಸುವವರು, ತಾವುಗಳು ಇರುವ ಸ್ಥಳಕ್ಕೆ ಸಮೀಪದಲ್ಲೇ ಪ್ರಾರ್ಥನೆ ಮತ್ತು ಪೂಜೆಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ದೇಗುಲಗಳನ್ನು ಕಟ್ಟುತ್ತಿರುವ ಈ ಕೆಲಸ, ಅನಿವಾಸಿ ಭಾರತೀಯರಿಗೆ ಸಂತೋಷ ತಂದಿದೆಯಂತೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

church Temple ಇಂಗ್ಲೆಂಡ್ ಅನಿವಾಸಿ ಭಾರತೀಯ