ಬದುಕಿದ್ದಾಗಲೇ ಹೆಣವಾಗುವ ಅನುಭವ!22-12-2017 559

ಜಪಾನ್ ದೇಶದಲ್ಲಿ ನಡೆಯುವ ಕೆಲವು ಆಚರಣೆಗಳು ತುಂಬಾ ವಿಚಿತ್ರವಾಗಿರುತ್ತವೆ. ಆ ಪೈಕಿ ಈ ಶುಕಾತ್ಸು ಹಬ್ಬ ಅನ್ನುವುದೂ ಒಂದು. ಪ್ರತಿ ವರ್ಷ ಡಿಸೆಂಬರ್ 16ರಂದು ಶುಕಾತ್ಸು ಹಬ್ಬ ಆಚರಿಸಲಾಗುತ್ತದೆ. ಒಂದು ರೀತಿಯಲ್ಲಿ, ಇದು ಸಾಯಲು ರಿಹರ್ಸಲ್ ಅಂದರೆ ತಾಲೀಮು ಮಾಡುವ ಹಬ್ಬವಂತೆ. ಈ ಹಬ್ಬದಲ್ಲಿ ಪಾಲ್ಗೊಳ್ಳುವ ಜನರು, ಮೃತ ವ್ಯಕ್ತಿಗೆ ಅಥವ ಶವಕ್ಕೆ ತೊಡಿಸುವ ರೀತಿಯ ಉಡುಪು ಧರಿಸುತ್ತಾರೆ ಮತ್ತು ಹೂವಿನಿಂದ ಅಲಂಕೃತವಾಗಿರುವ ಶವ ಪೆಟ್ಟಿಗೆಯ ಒಳಗೆ ಮಲಗುತ್ತಾರೆ. ಇದೆಲ್ಲವನ್ನೂ ಫೋಟೊ ತೆಗೆದು ಇರಿಸಿಕೊಳ್ಳಲಾಗುತ್ತದೆ. ಇದರ ಜೊತೆಗೆ, ಈ ಶುಕಾತ್ಸು ಹಬ್ಬದ ವೇಳೆ, ಹಣ ಕಟ್ಟಿ ಸ್ಮಶಾನದಲ್ಲಿ ತಮಗಾಗಿ ಜಾಗವನ್ನೂ ಕಾದಿರಿಸುತ್ತಾರಂತೆ.

ಜಪಾನ್ ದೇಶದಲ್ಲಿ ಶತಾಯುಷಿಗಳು ಮತ್ತು ವೃದ್ಧರ ಸಂಖ್ಯೆ ತುಂಬಾ ಹೆಚ್ಚು, ಹೀಗಾಗಿ, ಇವರ ಪೀಳಿಗೆಯ ನಂತರದ ವರ್ಷಗಳಲ್ಲಿ, ಜಪಾನ್ ಜನಸಂಖ್ಯೆ ಸುಮಾರು 3 ಕೋಟಿಯಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇಲ್ಲಿಂದ ಮುಂದಿನ ದಿನಗಳಲ್ಲಿ ಸಾವನ್ನಪ್ಪುವವರ ಸೇವೆಗಾಗಿ, ಜಪಾನ್‌ ದೇಶದಲ್ಲಿ ಒಂದು ದೊಡ್ಡ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಅಂತ್ಯಕ್ರಿಯೆ ಕಾರ್ಯಕ್ರಮಗಳು, ಸ್ಮಶಾನದಲ್ಲಿ ಜಾಗ ಕಾಯ್ದಿರಿಸುವಿಕೆ ಇತ್ಯಾದಿ, ಬದುಕಿನ ನಂತರದ ಸೇವೆಗಳಿಗೆ ಜಪಾನ್ ದೇಶದಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆಯಂತೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Japanese Festival ಶತಾಯುಷಿ ಮಾರುಕಟ್ಟೆ