‘ಸಿದ್ದು ಉಡಾಫೆ ಉತ್ತರ ನೀಡುವ ಸಿಎಂ’20-12-2017 298

ಶಿವಮೊಗ್ಗ: ಗುಜರಾತ್ ಫಲಿತಾಂಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು, ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾನಾಡಿದ ಅವರು, ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯ ಭರವಸೆ ಪೂರೈಸಿದ್ದೇವೆ ಎಂದು ಸಿಎಂ ಸುಳ್ಳು ಹೇಳುತ್ತಿದ್ದಾರೆ, ಸಿಎಂ ಹಿಂದುಳಿದವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಅವರಿಗೆ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ, ವಿದ್ಯಾಸಿರಿ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಈ ವರ್ಷ ಹಣವನ್ನೇ ಸರ್ಕಾರ ಬಿಡುಗಡೆ ಮ‌ಾಡಿಲ್ಲ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಭಾಗ್ಯ ತಲುಪುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಿಎಂ ಜಾತಿ-ಧರ್ಮ ಒಡೆಯುವ ಯತ್ನ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ, ಗುಜರಾತ್ ನಲ್ಲಿ ಜಾತಿ ಧರ್ಮದ ವಿಚಾರದಲ್ಲಿ ಸೋತಿದೆ, ಜಾತಿ ಆಧಾರದಿಂದ ಚುನಾವಣೆ ನಡೆಸದೆ, ಅಭಿವೃದ್ದಿಯ ಮೂಲಕ ಚುನಾವಣೆಗೆ ಸಿಎಂ ಬರಲಿ ಎಂದಿದ್ದಾರೆ. ಸಿದ್ದು ಉಡಾಫೆಯ ಉತ್ತರ ನೀಡುವ ಸಿಎಂ, ಸಿದ್ದು ಮುಸ್ಲಿಂ ಪರ ಅಂತ ಮತ ಪಡೆಯಲು ಹೋದರೆ ನೀವು ಖಂಡಿತ ಚುನಾವಣೆಯಲ್ಲಿ ಸೋಲುತ್ತೀರಿ ಎಂದರು. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಗೆಲುವನ್ನು ಜನರ ತೀರ್ಪು ಎಂದು ತಿಳಿದುಕೊಳ್ಳಿ, ಇವಿಎಂ ನಿಂದ ಗೆಲುವು ಅಂತ ಹೇಳುವುದು ಸರಿಯಲ್ಲ, ಕುಣಿಯಲಾರದವರು ನೆಲ ಡೊಂಕು ಅಂತ ಹೇಳುವಂತೆ ಕಾಂಗ್ರೆಸ್ ನವರು ಇವಿಎಂ ಬಗ್ಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಗುಜರಾತ್ ನಲ್ಲಿ ಮಸೀದಿಗೆ ಹೋಗದೆ ದೇವಾಲಯಕ್ಕೆ ಹೋಗಿದ್ದ ಕಾರಣ ಹೆಚ್ಚಿನ ಸೀಟು ಬಂದಿದೆ ಎಂದರು.


ಒಂದು ಕಮೆಂಟನ್ನು ಬಿಡಿ