ಅರೆ ಬೆತ್ತಲೆಗೊಳಿಸಿ ಕಳ್ಳರಿಗೆ ಥಳಿತ14-12-2017 179

ಚಿತ್ರದುರ್ಗ: ಚಿತ್ರದುರ್ಗದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಕಳವು ಮಾಡುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿ ಬಿದ್ದ ಕಳ್ಳರನ್ನು ಹಿಡಿದು ಬಟ್ಟೆ ಬಿಚ್ಚಿ ಅರೆ ಬೆತ್ತಲೆ ಗೊಳಿಸಿದ ಸಾರ್ವಜನಿಕರು. ಇಷ್ಟಬಂದಂತೆ ಹೊಡೆದಿದ್ದಾರೆ. ಕಳ್ಳರನ್ನು ಚಿತ್ರದುರ್ಗ ಹಾಯ್ಕಲ್ ಗ್ರಾಮದ ನಾಗರಾಜರೆಡ್ಡಿ ಮತ್ತು ನೆಲಗೇತನಹಟ್ಟಿಯ ಕೇಶವಮುರ್ತಿ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ