ಮೋದಿ ಬಗ್ಗೆ ಬೇಸತ್ತ ತೆರಿಗೆ ಅಧಿಕಾರಿಗಳು...!13-12-2017 10359

ನರೇಂದ್ರ ಮೋದಿ ಸರ್ಕಾರ, ಹಳೆಯ ಐದುನೂರು ಮತ್ತು ಒಂದು ಸಾವಿರ ರೂಪಾಯಿ ನೋಟು ರದ್ದುಪಡಿಸಿದ್ದು, ಕಪ್ಪು ಹಣದ ಬೇಟೆ ಆರಂಭಿಸಿದ್ದು, ತೆರಿಗೆ ವಂಚನೆ ವಿರುದ್ಧ ಕ್ರಮ ಕೈಗೊಂಡಿದ್ದು ಇತ್ಯಾದಿ ಎಲ್ಲವನ್ನೂ ಮಾಡಲು ಶುರು ಮಾಡಿದ್ದು ದೇಶಕ್ಕೆ ಮತ್ತು ಜನರಿಗೆ ಎಷ್ಟರಮಟ್ಟಿಗೆ ಒಳ್ಳೆಯದುಮಾಡಿದೆ ಅನ್ನುವುದು ಬೇರೆಯ ಮಾತು. ಆದರೆ, ಇದರಿಂದ ಒಂದು ವರ್ಗದ ಜನರು ಮಾತ್ರ ವಿಪರೀತ ಪೆಟ್ಟುತಿಂದಿದ್ದಾರೆ, ಅವರೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು.

ಈ ಮೊದಲೇ ಆದಾಯ ತೆರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇತ್ತು. ತೆರಿಗೆ ವಂಚನೆ ಬಗ್ಗೆ ತನಿಖೆ, ಪರಾಮರ್ಶೆ, ವಿಚಾರಣೆ, ವರದಿ, ಲೆಕ್ಕ ಪರಿಶೀಲನೆ ಇತ್ಯಾದಿ ಕೆಲಸಗಳ ಜವಾಬ್ದಾರಿ ಹಿಂದಿನಿಂದಲೂ ಇದ್ದೇ ಇದೆ. ಇದರ ಜೊತೆಗೆ, ಇದೀಗ ಕಂಪ್ಯೂಟರ್‌ಗಳು ತೆಗೆದು ತೆಗೆದು ಕೊಡುತ್ತಿರುವ ಸಾವಿರಾರು ಅನುಮಾನಾಸ್ಪದ ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಸಂಬಂಧಿಸಿದ ವ್ಯಕ್ತಿಗಳ ಹಿಂದೆ ಹೋಗುವ ಕೆಲಸವನ್ನೂ ಮಾಡಬೇಕಾಗಿದೆ.

ಈಗಾಗಲೇ ಹಲವಾರು ಜವಾಬ್ದಾರಿಗಳ ಕಾರಣದಿಂದ ಬಳಲಿದ್ದ ಅಧಿಕಾರಿಗಳು, ದೇಶದ ಜನರ ಆದಾಯದ ಬಗ್ಗೆ ಮೋದಿ ಸರ್ಕಾರಕ್ಕಿರುವ ವಿಶೇಷ ಆಸಕ್ತಿಯ ಕಾರಣ ವಿಪರೀತ ಒತ್ತಡಕ್ಕೆ ಒಳಗಾಗಿದ್ದಾರೆ ಮಾತ್ರವಲ್ಲ, ಅನೇಕ ಅಧಿಕಾರಿಗಳು ಈ ಒತ್ತಡ ಹೀಗೆ ಮುಂದುವರಿದರೆ, ನಾವು ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಇದಲ್ಲದೆ, ಆದಾಯ ತೆರಿಗೆ ಇಲಾಖೆಯ ಬಹುತೇಕ ಅಧಿಕಾರಿಗಳಿಗೆ, ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಹಮತ ಇಲ್ಲ ಮತ್ತು ಆ ಬಗ್ಗೆ ಅವರು ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ