ಮೈನಸ್ 50 ಡಿಗ್ರಿ ಸೆ. ಚಳಿಯ ಊರು..11-12-2017 478

ಬೆಂಗಳೂರಿನಲ್ಲಿ ಕನಿಷ್ಟ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ಬಂದುಬಿಟ್ಟರೆ ಸಾಕು, ಆಹಾ ಚಳಿ ಚಳಿ ಎಂದು ಹೇಳುತ್ತಾ, ಮನೆಯಿಂದ ಹೊರಬರುವುದಕ್ಕೇ ನಾವು ಹಿಂದೇಟುಹಾಕುತ್ತೇವೆ. ತಲೆಗೆ ಉಲನ್ ಟೋಪಿ, ಮೈಗೆ ಸ್ವೆಟರ್ ಇಲ್ಲದೆ ಆಚೆಗೆ ಬರುವುದೇ ಕಷ್ಟ. ಹೀಗಿರುವಾಗ, ಆ ಊರಿನ ಈಗಿನ ತಾಪಮಾನ ಮೈನಸ್ 50 ಡಿಗ್ರಿ ಸೆಲ್ಸಿಯಸ್, ಜಗತ್ತಿನ ಅತ್ಯಂತ ಚಳಿ ವಾತಾವರಣವಿರುವ ಇಂಥ ಊರಿನಲ್ಲೂ ಮನುಷ್ಯರು ವಾಸ ಮಾಡುತ್ತಾರೆ. ಇದು ರಷ್ಯಾದ ಒಯ್‌ಮ್ಯಾಕೊನ್ ಗ್ರಾಮ, ಒಯ್‌ಮ್ಯಾಕೊನ್ ಅಂದರೆ ಹೆಪ್ಪುಗಟ್ಟದ ನೀರು ಎಂದು ಅರ್ಥವಂತೆ. ಅದಕ್ಕೆ ಕಾರಣ, ಅಲ್ಲಿರುವ ಬಿಸಿ ನೀರಿನ ಬುಗ್ಗೆ. ಆದರೆ, ಇಲ್ಲಿನ ತಾಪಮಾನ -71.2 ಸೆಲ್ಸಿಯಸ್ ವರೆಗೂ ಇಳಿಯುತ್ತದಂತೆ. ಆ ಊರಿನಲ್ಲಿ ಹಗಲಿನ ಅವಧಿ, ಚಳಿಗಾಲದಲ್ಲಿ ಕೇವಲ 3 ಗಂಟೆಗಳಿದ್ದರೆ, ಬೇಸಿಗೆಯಲ್ಲಿ ದಿನದ 21 ಗಂಟೆಗಳ ಕಾಲ ಹಗಲೇ ಇರುತ್ತದೆ. ಸುಮಾರು 500 ಜನರಿರುವ ಈ ಊರಿನಲ್ಲಿ ಒಂದೇ ಒಂದು ಅಂಗಡಿ ಇದೆ. ಆಹಾರ ತಯಾರಿಕೆಗೆ ಮತ್ತು ತಮ್ಮನ್ನು ತಾವು ಬೆಚ್ಚಗಿರಿಸಿಕೊಳ್ಳಲು ಇಲ್ಲಿನ ಜನ ಸೌದೆ ಮತ್ತು ಇದ್ದಿಲ್ಲನ್ನು ಬಳಸುತ್ತಾರೆ. ಈ ಊರಿನಲ್ಲಿ ಶಾಲೆಯೂ ಇದೆ. ಇಷ್ಟೊಂದು ಚಳಿ ಮತ್ತು ಹಿಮವಿರುವ ಈ ಊರಿನಲ್ಲಿ, ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಹಿಮಸಾರಂಗ ಮತ್ತು ಕುದುರೆಗಳನ್ನು ಸಾಕುವ ಇಲ್ಲಿನ ಜನರು, ಅವುಗಳ ಹಾಲನ್ನು ಕುಡಿಯುತ್ತಾರೆ ಮತ್ತು ಅವುಗಳನ್ನೇ ಕೊಂದು ಅವುಗಳ ಮಾಂಸ ತಿಂದು ಬದುಕುತ್ತಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Oymyakon Russia ಸೆಲ್ಸಿಯಸ್ ತಾಪಮಾನ