ಪ್ರತಿಷ್ಠಿತ ಕಂಪನಿಗಳ ನಕಲಿ ಶೂಗಳು, ಬ್ಯಾಗ್‍ಗಳ ಮಾರಾಟ ಜಾಲ ಪತ್ತೆ..ಮೊಹ್ಮದ್ ಶಿಬಾಬ್ ಬಂಧನ



12-04-2017 246

ಬೆಂಗಳೂರು, ಏ. 12- ಪ್ರತಿಷ್ಠಿತ ಕಂಪನಿಗಳ ನಕಲಿ ಶೂಗಳು, ಬ್ಯಾಗ್‍ಗಳು, ಕನ್ನಡಕಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು 19 ಲಕ್ಷ 10 ಸಾವಿರ ಮೌಲ್ಯದ ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರೆಸಿಡೆನ್ಸಿ ರಸ್ತೆಯ ನ್ಯಾಷನಲ್ ಪ್ಲಾಜ್ ಶಾಪಿಂಗ್ ಮಾಲ್‍ನಲ್ಲಿ ಲೂಯಿಸ್ ವ್ಯೂಷನ್ ಕಂಪನಿಯ ನಕಲಿ ಲ್ಯಾಪ್ಟಾಪ್ ಬ್ಯಾಗ್, ಕನ್ನಡಕ ಮಾರಾಟ ಮಾಡುತ್ತಿದ್ದ ಮುಜಾಮಿಲ್ ಖಾನ್ ಎಂಬಾತನನ್ನು ಬಂಧಿಸಿ 6 ಲಕ್ಷ 40 ಸಾವಿರ ಮೌಲ್ಯದ ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಬ್ರಿಗೇಡ್ ರಸ್ತೆಯ ಫ್ಯಾಷನ್ ಸ್ಟಾರ್ ಅಂಗಡಿಯ ಮೇಲೆ ದಾಳಿ ನಡೆಸಿ ಲೂಯಿಸ್ ವ್ಯೂಷನ್ ಕಂಪನಿಯ ನಕಲಿ ಬ್ಯಾಗ್ಗಳು, ಪರ್ಸಗಳು, ಬೆಲ್ಟ್ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ 7 ಲಕ್ಷ 50 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬ್ರಿಗೇಡ್ ರಸ್ತೆಯ ಜಿಜು ಸ್ಟೆಪ್ ಔಟ್ ಅಂಗಡಿ ಮೇಲೆ ದಾಳಿ ನಡೆಸಿರುವ ಪೊಲೀಸರು ಲೂಯಿಸ್ ವ್ಯೂಷನ್ ಕಂಪನಿಯ ನಕಲಿ ಶೂಗಳು, ಪರ್ಸ್, ಬೆಲ್ಟ್ಗಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮೊಹ್ಮದ್ ಶಿಬಾಬ್ ಎಂಬಾತನನ್ನು ಬಂಧಿಸಿ 5 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ.

Links :