ಹೃದಯಾಘಾತ: ಡಿವೈಎಸ್ ಪಿ ಸಾವು01-12-2017 330

ಚಿಕ್ಕಮಗಳೂರು: ಕಳೆದ ರಾತ್ರಿ ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಸಿಎಂ ವಾಸ್ತವ್ಯ ಹೂಡಿದ್ದು,  ಈ ವೇಳೆ ಸಿಎಂ ಭದ್ರತೆಗೆ ನಿಯೋಜನೆಗೊಂಡ ಡಿವೈಎಸ್ಪಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶೇಖ್ ಹುಸೇನ್, ಹೃದಯಾಘಾತಕ್ಕೊಳಗಾದ ಡಿವೈಎಸ್ಪಿ. ಇವರು ಗುಪ್ತಚರ ಇಲಾಖೆ ಡಿವೈಎಸ್ಪಿ. ಲೋ ಬಿಪಿ ಹಾಗೂ ಶುಗರ್ ನಿಂದಾಗಿ ಹೃದಯಾಘಾತವಾಗಿದೆ ಎನ್ನಲಾಗಿದ್ದು. ಸಿಎಂ ಹೆಲಿಕಾಪ್ಟರ್ ಟೆಕ್ ಆಫ್ ಆದ ಮೇಲೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೆ ಇವರನ್ನು ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ, ಶಿವಮೊಗ್ಗ, ನಂತರ ಹುಬ್ಬಳ್ಳಿಗೆ ರವಾನಿಸುವ ವೇಳೆ ಮೃತಪಟ್ಟಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

DYSP chikkamagaluru ಹೃದಯಾಘಾತ ಗುಪ್ತಚರ ಇಲಾಖೆ