ಸೀರಿಯಲ್ ನೋಡಿ ಬೆಂಕಿ ಹಚ್ಚಿಕೊಂಡ ಬಾಲಕಿ29-11-2017 323

ದಾವಣಗೆರೆ: ಖಾಸಗಿ ವಾಹಿನಿಯಲ್ಲಿನ ಸೀರಿಯಲ್ ನೋಡಿ, ಬೆಂಕಿ ಹಚ್ಚಿಕೊಂಡು ಬಾಲಕಿಯೊಬ್ಬಳು ಮೃತ ಪಟ್ಟಿರುವ ದಾರುಣ ಘಟನೆಯು ದಾವಣಗೆರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಘಟನೆ ನಡೆದಿದೆ. ಪ್ರಾರ್ಥನಾ (7), ಬೆಂಕಿ ಹಚ್ಚಿಕೊಂಡು ಸಾವಿಗೀಡಾದ ಬಾಲಕಿ ಎಂದು ಗುರುತಿಸಲಾಗಿದೆ. ಮೃತ ಬಾಲಕಿ ಹರಿಹರ ನಗರದ ಸೇಂಟ್ ಮೇರಿಸ್ ಶಾಲೆಯಲ್ಲಿ ಓದುತ್ತಿರುವುದಾಗಿ ತಿಳಿದು ಬಂದಿದೆ.

ಚೈತ್ರ-ಮಂಜುನಾಥ ದಂಪತಿಯ ಮಗಳಾದ ಪ್ರಾರ್ಥನಾ, ಇದೇ ತಿಂಗಳ 11 ರಂದು ಖಾಸಗಿ ವಾಹಿನಿಯಲ್ಲಿನ ಸೀರಿಯಲ್ ನೋಡುತ್ತಿದ್ದ ಬಾಲಕಿ, ಸೀರಿಯಲ್ ನಲ್ಲಿ ಬೆಂಕಿ ಹಚ್ಚಿಕೊಂಡು ನಾಯಕಿ ಕುಣಿಯುತ್ತಿರುವ ದೃಶ್ಯ ನೋಡಿ, ಅದೇ ರೀತಿ ಮಾಡಿಕೊಂಡು ಬಾಲಕಿ, ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Tv Serial Davanagere ಖಾಸಗಿ ವಾಹಿನಿ ಆಕ್ರಂದನ