ಇಬ್ಬರ ಅನುಮಾನಾಸ್ಪದ ಸಾವು28-11-2017 268

ಹಾಸನ: ಹಾಸನ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಸುಟ್ಚ ರೀತಿಯಲ್ಲಿ ಯುವತಿಯ ಶವ ಪ ಪತ್ತೆಯಾಗಿದೆ. ಅರಸೀಕೆರೆ ಸಮೀಪ ಅಸ್ಥಿಪಂಜರ ಪತ್ತೆಯಾಗಿದ್ದು, ಮತ್ತೊಂದೆಡೆ ಬೇಲೂರು ಪಟ್ಟಣದ ಹೊರ ಭಾಗದಲ್ಲಿ ಗಂಡಸಿನ ಶವ ಕಂಡುಬಂದಿದೆ. ಎರಡೂ ಪ್ರಕರಣದಲ್ಲಿ ಇಬ್ಬರನ್ನು ಕೊಲೆಗೈದು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.

ಅರಸೀಕೆರೆ ತಾಲ್ಲೂಕಿನ ಕಾಮವಹಳ್ಳಿಯ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರವೆಸಗಿದ ಬಳಿಕ ಹಣದ ವಿಚಾರದಲ್ಲಿ ಯುವತಿಯ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬೇಲೂರಿನ ಯಗಚಿ ಡ್ಯಾಂ ಬಳಿ ಇಟ್ಟಿಗೆ ಗೂಡಿನ ಬಳಿ ಒರ್ವ ವ್ಯಕ್ತಿಯನ್ನ ಕೊಲೆಗೈದು ಬಳಿಕ ಸುಟ್ಟು ಹಾಕಲಾಗಿದೆ. ಮುನಾವರ್ ಪಾಷಾ(55) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಲ್ಲೂ ಹಣದ ವಿಚಾರಕ್ಕೆ ಕೊಲೆಯಾಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಪೊಲೀಸರು.

ಸ್ಥಳಕ್ಕೆ ಎಎಸ್ಪಿ ಜ್ಯೋತಿರಾಜ್ ಮತ್ತು ಅರಸೀಕೆರೆ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪ್ರಕರಣಕ್ಕೆ ವೃತ್ತ ನಿರೀಕ್ಷಕ ಲೋಕೇಶ್ ಮತ್ತವರ ಸಿಬ್ಬಂದಿ ಬೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Hassan skeleton ಅರಸೀಕೆರೆ ಬೇಲೂರು