ಅಭಿಮಾನಿಗೆ ಕಮಲ್ ಕಪಾಳ ಮೋಕ್ಷ27-11-2017 506

ಬೆಂಗಳೂರು: ಚಿತ್ರರಂಗದ ನಟ-ನಟಿಯರು, ಸೆಲೆಬ್ರೆಟಿಗಳು ಅಭಿಮಾನಿಗಳ ಮೇಲೆ ಕೋಪಿಸಿಕೊಳ್ಳೋದು ಸಾಮಾನ್ಯ. ಆದರೆ ಬಹುಭಾಷಾ ನಟ ಕಮಲ ಹಾಸನ್​​ ಅಭಿಮಾನಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿ ಇದೀಗ ವಿವಾದಕ್ಕೆ ಕಾರಣವಾಗಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಬಂದಿದ್ದ ಕಮಲ್​​ ಹಾಸನ್​​​ ಅವರನ್ನು ಅಭಿಮಾನಿಯೊಬ್ಬ ಮಾತನಾಡಿಸಲು ಯತ್ನಿಸಿದ್ದಾನೆ. ಅಭಿಮಾನಿಯ ಈ ಅತಿರೇಕದ ವರ್ತನೆಗೆ ಕಮಲ್ ಹಾಸನ ಸಿಟ್ಟಾಗಿದ್ದು, ಅಭಿಮಾನಿಯನ್ನು ತಳ್ಳಿ ಆತನಿಗೆ ಕಪಾಳ ಮೋಕ್ಷ್​ ಮಾಡಿದ್ದಾರೆ. ಈ ವಿಡಿಯೋ ಮೊಬೈಲ್​ನಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.

ಇನ್ನು ನಟ ಕಮಲ್ ಹಾಸನ್ ಅವರನ್ನು ಇತ್ತೀಚೆಗೆ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿಪಿ ರೂಪಾ ಡಿ ಮೌದ್ಗೀಲ್ ಅವರು ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರೂಪಾ ಅವರು ಕಮಲ್ ಜತೆಗಿನ ಫೋಟೋವೊಂದನ್ನು ಟ್ವಿಟ್ಟರ್‍ ನಲ್ಲಿ ಹಂಚಿಕೊಂಡಿದ್ದು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಕೆಲವರು ಕಮಲ್ ಜತೆ ಫೋಟೋ ಏಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ರೂಪಾ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ ಸಾರ್ವಜನಿಕರ ಟೀಕೆಗಳು ಟ್ವೀಟ್ ರೂಪದಲ್ಲಿ ಹರಿದು ಬರತೊಡಗಿದಾಗ, ಇದಕ್ಕೆ ರೂಪಾ ಅವರು ಪ್ರತ್ಯುತ್ತರ ನೀಡಿದ್ದಾರೆ. ಮಾನವ ಸಂಘ ಜೀವಿ, ಸಾಮಾಜಿಕ ಜಾಲ ತಾಣಗಳಲ್ಲಿ ವಿಹರಿಸುವಾಗ, ವ್ಯವಹರಿಸುವಾಗ, ಪ್ರತಿಕ್ರಿಯಿಸುವಾಗ ಸಾಮಾಜಿಕ ಬದ್ಧತೆ, ಜವಾಬ್ದಾರಿ ಹೊಂದಿರಬೇಕು, ಕಮಲ್ ಅವರೊಟ್ಟಿಗೆ ತೆಗೆಸಿಕೊಂಡ ಫೋಟೋ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ತಿಳಿ ಹೇಳಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kamal Haasan Roopa moudgil ಟ್ವೀಟ್ ಸೆಲೆಬ್ರೆಟಿ