ದಂಡ ಕಟ್ಟಿದ ಸಚಿವ ಪ್ರಮೋದ್ ಮಧ್ವರಾಜ್11-11-2017 195

ಉಡುಪಿ: ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ಆಕ್ಷೇಪಕ್ಕೆ ಗುರಿಯಾಗಿದ್ದ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಇದೀಗ ಸ್ವ-ಇಚ್ಛೆಯಿಂದ ದಂಡ ಕಟ್ಟಿದ್ದಾರೆ.

ಬ್ರಹ್ಮಾವರದ ಕರ್ಜೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕಾರ್ಯಕರ್ತರೊಬ್ಬರ ಬೈಕ್ ಓಡಿಸಿದ್ದರು. ಆದರೆ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಸಚಿವರೇ ನಿಯಮ ಪಾಲಿಸದಿದ್ದರೆ ಹೇಗೆ ಎಂದು ಹಲವರು ಪ್ರಶ್ನಿಸಿದ್ದರು. ಈ ವಿಷಯ ಗೊತ್ತಾದ ನಂತರ ಪ್ರಮೋದ್ ಅವರು, 100 ರೂ. ದಂಡ ಪಾವತಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Pramodh Madhvaraj Udupi ಹೆಲ್ಮೆಟ್ ಸಬಲೀಕರಣ