‘ಬಿಜೆಪಿ ತಮ್ಮ ಪಾಪ ಕಳೆಯಲು ಮುಂದಾಗಿದೆ’-ಪರಂ31-10-2017 538

ಚಾಮರಾಜನಗರ: ಬಿಜೆಪಿಯವರು ಯಾರನ್ನು ಪರಿವರ್ತನೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು, 'ನಾವುಗಳು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಈಗ ಪರಿವರ್ತನೆಯಾಗಿದ್ದೇವೆ' ಎಂದು ಪರಿವರ್ತನಾ ಯಾತ್ರೆಯ ಮೂಲಕ ಹೇಳಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ  ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ, 'ಮನೆ ಮನೆಗೆ ಕಾಂಗ್ರೆಸ್' ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಜನರು ಕಾಶಿಗೆ ಹೋಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೆ ತಮ್ಮ ಪಾಪಗಳು ಕಳೆದು ಹೋಗುತ್ತವೆ ಎನ್ನುತ್ತಾರೆ. ಅದೇ ರೀತಿ ಬಿಜೆಪಿ ಅವರು ಪರಿವರ್ತನಾ ಯಾತ್ರೆ ಮಾಡುವ ಮೂಲಕ ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. 2018ಕ್ಕೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ. ಈ ಬಗ್ಗೆ ಅನುಮಾನವೇ ಬೇಡ, ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಒಂದು ಕಮೆಂಟನ್ನು ಬಿಡಿ