ನೃತ್ಯ ಶಾಲೆಯಲ್ಲಿ ಬಾಲಕಿ ಆತ್ಮಹತ್ಯೆ !31-10-2017 217

ಬೆಂಗಳೂರು: ಯಲಹಂಕ ಉಪನಗರದ ಅಟ್ಟೂರು ಲೇಔಟ್‍ ನಲ್ಲಿ ನೃತ್ಯ ಕಲಿಯಲು ಹೋಗುತ್ತಿದ್ದ ಬಾಲಕಿ, ನಿನ್ನೆ ರಾತ್ರಿ ನೃತ್ಯ ಶಾಲೆಯಲ್ಲೇ ಕ್ರಿಮಿಗಳಿಗೆ ಸಿಂಪಡಿಸುವ ಔಷಧಿ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಅಟ್ಟೂರು ಲೇಔಟ್‍ ನ ಚಂದನಾ (17)ಎಂದು ಆತ್ಮಹತ್ಯೆಗೆ ಶರಣಾದವರನ್ನು ಗುರುತಿಸಲಾಗಿದೆ. ನೃತ್ಯ ಶಿಕ್ಷಕ ಸತೀಶನ ಕಿರುಕುಳದಿಂದಲೇ ಈ ಘಟನೆ ನಡೆದಿದೆ ಎಂದು ಚಂದನಾ ಪೋಷಕರು ಆರೋಪಿಸಿದ್ದಾರೆ. ನೃತ್ಯ ಶಾಲೆಗೆ ಹೋಗುತ್ತಿದ್ದಾಗ ಅಲ್ಲಿ ಸತೀಶ್ ಪರಿಚಿತನಾಗಿದ್ದು, ರಾತ್ರಿ ಶಾಲೆಗೆ ಹೋಗಿದ್ದ ಚಂದನಾ ಅಲ್ಲಿ ಮೆಡಿಕೇರ್ ಕುಡಿದು ಅಸ್ವಸ್ಥಳಾಗಿದ್ದಾಳೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

ಸ್ಥಳಕ್ಕೆ ಭೇಟಿ ನೀಡಿರುವ ಯಲಹಂಕ ಪೊಲೀಸರು ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದ್ದು, ರಾತ್ರಿ ಚಂದನಾ ನೃತ್ಯ ಶಾಲೆಗೆ ಹೋಗಿದ್ಯಾಕೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸತೀಶನೇ ಆಕೆಯನ್ನು ನೃತ್ಯ ಶಾಲೆಗೆ ಕರೆಸಿಕೊಂಡು ಕಿರುಕುಳ ನೀಡಿರಬಹುದು, ಇದರಿಂದ ಬೇಸತ್ತು ಬಾಲಕಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅನುಮಾನದ ಮೇಲೆ, ಆತನನ್ನು ಬಂಧಿಸಿರುವ ಯಲಹಂಕ ಉಪನಗರ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಆತ್ಮಹತ್ಯೆ ನೃತ್ಯ ಶಾಲೆ