ಶ್ರೀ ಕೃಷ್ಣ ಮಠದಲ್ಲಿ ಎಣ್ಣೆ ಶಾಸ್ತ್ರ18-10-2017 656

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮ ಸಡಗರದ ನರಕ ಚತುರ್ದಶಿ ಆಚರಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮ ನಡೆಯಿತು.

ಮಠದಲ್ಲಿ ನೂರಾರು ಭಕ್ತರಿಗೆ ಸ್ವಾಮೀಜಿಗಳು ಎಣ್ಣೆ ಶಾಸ್ತ್ರ ನಡೆಸಿದರು. ಮಠದ ಆವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಭಕ್ತರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೇಜಾವರ ವಿಶ್ವೇಶ ತೀರ್ಥ, ಪೇಜಾವರ ವಿಶ್ವಪ್ರಸನ್ನ ತೀರ್ಥ, ಕಾಣಿಯೂರು ಶ್ರೀ, ಸೋದೆ ಸ್ವಾಮೀಜಿ ಸ್ವಾಮೀಜಿ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಹಬ್ಬದ ಅಂಗವಾಗಿ ಶ್ರೀ ಕೃಷ್ಣ ಮಠದಲ್ಲಿ  ಜಲ ಪೂರಣ ಗಂಗಾ ಪೂಜೆ ನಡೆಸಲಾಯಿತು. ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಗಂಗಾಪೂಜೆಯನ್ನು ಮಠದ ಪುರೋಹಿತರಾದ ವೇ.ಮೂ. ಗೋಪಾಲಕೃಷ್ಣ ಆಚಾರ್ಯರು ನೆರವೇರಿಸಿದರು.