ಯುವಕನಿಗೆ ಪುಂಡರ ಥಳಿತ16-10-2017 319

ಬೆಂಗಳೂರು: ಕುಡಿದ ಮತ್ತಿನಲ್ಲಿ ಪುಂಡರ ಗ್ಯಾಂಗ್ ಯುವಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಗ್ಯಾಂಗ್ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಎಂ.ಎಂ ಬಾರ್ ಬಳಿ ನಡೆದಿದೆ.

ಎಂ.ಎಂ.ಬಾರ್ ನ ಮುಂದೆ ಕುಡಿದು ಗಲಾಟೆ ಮಾಡುತ್ತಿದ್ದ ಗ್ಯಾಂಗ್ ರಸ್ತೆಯಲ್ಲಿ ಹೋಗ್ತಿದ್ದ ಯುವಕನನ್ನು ನೋಡಿ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡೋದಕ್ಕೆ ಮುಂದಾಗಿದೆ. ಈ ಹಿಂದೆ ಎಂ.ಎಂ ಬಾರ್ ನ ಆಸುಪಾಸಿನಲ್ಲೇ ಎರಡು ಮೂರು ಕೊಲೆಗಳು ನಡೆದಿದ್ವು. ರೌಡಿಗಳು ಇದೇ ಬಾರ್ ನಲ್ಲಿ ಕೂತು ಕುಡಿದು ಗಲಾಟೆ ಮಾಡಿಕೊಂಡು ಪದೇ ಪದೇ ಅವಾಂತರವನ್ನು ಸೃಷ್ಟಿಸಿದ್ದು, ಪೊಲೀಸರು ಮಾತ್ರ ಇತ್ತ ತಲೆ ಕೂಡ ಹಾಕ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.


ಒಂದು ಕಮೆಂಟನ್ನು ಬಿಡಿ