ಉಕ್ಕಿ ಹರಿದ ನದಿ: ಗ್ರಾಮ ಜಲಾವೃತ !28-09-2017 421

ವಿಜಯಪುರ: ಏಕಾಏಕಿ ಉಜನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪರಿಣಾಮ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ತಾರಾಪೂರ ಗ್ರಾಮ ಮತ್ತೆ ಜಲಾವೃತ ಗೊಂಡಿದೆ.

ಮಹಾರಾಷ್ಟ್ರದಲ್ಲಿ ಮಳೆ ಸ್ಪಲ್ಪ ಬಿಡುವು ನಿಡಿದ್ದರಿಂದ, ಐದು ದಿನಗಳಿಂದ ಭೀಮಾ ನದಿ ಹರಿವು ಕೊಂಚ ಇಳಿ ಮುಖವಾಗಿತ್ತು ಆದರೆ, ಏಕಾಏಕಿ ಉಜನಿ ನದಿಗೆ ನೀರು ಬಿಟ್ಟ ಪರಿಣಾಮ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಭೀಮಾ ನದಿ ತೀರದಲ್ಲಿರುವ ತಾರಾಪೂರ ಗ್ರಾಮ ನಾಲ್ಕನೇ ಬಾರಿ ಜಲಾವೃತ್ತಗೊಂಡಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ