ಕುಡುಕ ಕಳ್ಳ ಅರೆಸ್ಟ್ !23-09-2017 285

ಚಿತ್ರದುರ್ಗ: ಎಟಿಎಂ ನಲ್ಲಿ ಹಣ ಕಳವು ಮಾಡಲು ಹೋಗಿದ್ದ, ಕುಡುಕ ಕಳ್ಳನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಈ ಘಟನೆಯು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಹಣ ಕದಿಯಲು ಎಟಿಎಂಗೆ ಬಂದಿದ್ದ ಕಳ್ಳನೊಬ್ಬ, ಹಣ ಕದಿಯಲಾಗದೆ, ಎಟಿಎಂ ಮಷಿನ್ ಜಖಂಗೊಳಿಸಿ, ಸಿ.ಸಿ ಕ್ಯಾಮೆರಾ ಒಡೆದು ಹಾಕುವ ವೇಳೆ, ಈತನ ಕೃತ್ಯವನ್ನು ಗಮನಿಸುತ್ತಿದ್ದ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ಕುಡುಕ ಕಳ್ಳನನ್ನು ಬಂಧಿಸಿದ್ದಾರೆ. ಈತ ಅದೇ ಗ್ರಾಮದ ಹೂವಿನ ವ್ಯಾಪಾರಿ ನಂದೀಶ(29) ಎಂದು ತಿಳಿದು ಬಂದಿದೆ. ಇನ್ನು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಾಜೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ