ನಂಬಿಸಿ ಅತ್ಯಾಚಾರ: ಕಾಮುಕನ ಬಂಧನ !11-09-2017 201

ಬೆಂಗಳೂರು: ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ ಕಾಮುಕನನ್ನು ಬಂಧಿಸುವಲ್ಲಿ ಹುಳಿಮಾವು ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಮುಕನ ವಿರುದ್ಧ ಪತ್ನಿ ನೀಡಿದ ಮಾಹಿತಿ ಆಧರಿಸಿ ಹುಳಿಮಾವುವಿನ ಕಿರಣ್ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ. ಬಂಧಿತ ಕಿರಣ್‍ಗೆ ಮದುವೆಯಾಗಿ ಒಂದು ಗಂಡು ಮಗುವಿದೆ. ಆದರೂ, ಅಮಾಯಕ ಶಾಲಾ ಬಾಲಕಿಯರನ್ನು ಪ್ರೀತಿಸುವ ನಾಟಕವಾಡಿ ಬಲೆಗೆ ಬೀಳಿಸಿಳ್ಳುತ್ತಿದ್ದನಂತೆ. ಬನ್ನೇರುಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್‍ನಲ್ಲಿ ಸಿನಿಮಾ ತೋರಿಸಿ, ಮಾಲ್ ಸುತ್ತಿಸಿಕೊಂಡು ಕುರುಕಲು ತಿಂಡಿಯನ್ನು ಬ್ಯಾಗ್‍ಗೆ ತುಂಬಿಸಿ, ನಂಬಿಸಿ ಅತ್ಯಾಚಾರ ಮಾಡುತ್ತಿದ್ದನು.

ಈತ 8 ಜನ ಅಪ್ರಾಪ್ತ ಬಾಲಕಿಯರನ್ನು ನಂಬಿಸಿ ಮೋಸ ಮಾಡಿದ್ದು, ಇವನಿಂದ ಹಾದಿ ತಪ್ಪಿದವರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿದ್ದಾನೆ ಎನ್ನಲಾಗಿದೆ. ಈತ ವಾಸವಿದ್ದ ಪಕ್ಕದ ಮನೆಯ ಬೀದಿಯ ಹುಡುಗಿಯನ್ನು ಮೂರು ತಿಂಗಳ ಗರ್ಭಿಣಿ ಮಾಡಿದ್ದಾನೆ ಎಂದು ದೂರಿನಲ್ಲಿ ಕಿರಣ್ ಪತ್ನಿ ತಿಳಿಸಿದ್ದರು. ಕಾಮುಕ ಪತಿಯ ಹೀನಕೃತ್ಯಗಳನ್ನು ಸಹಿಸದ ಪತ್ನಿ ವಿವರವಾದ ದೂರು ನೀಡಿ ಮಾಹಿತಿ ನೀಡಿದ್ದು, ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.


ಒಂದು ಕಮೆಂಟನ್ನು ಬಿಡಿ