ಎಚ್ಚರ: ಕಾರ್ ನಲ್ಲಿ ಬಂದು ಸರ ಕಸಿಯುತ್ತಾರೆ17-08-2017 535

ಬೆಂಗಳೂರು: ಕಾರಿನಲ್ಲಿ ಬಂದ ದುಷ್ಕರ್ಮಿಗಳು, ವಾಯು ವಿಹಾರ ನಡೆಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್‍ನ ಶಂಕರಪುರ ಪಾರ್ಕ್ ಬಳಿ ನಡೆದಿದೆ. ಶಂಕರಪುರ ಪಾರ್ಕ್ ಬಳಿ ಬೆಳಿಗ್ಗೆ 7.45ರ ವೇಳೆ ವಾಯು ವಿಹಾರ ಮಾಡುತ್ತಿದ್ದ ಶಾರದಮ್ಮ ಅವರ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪ ಮಾಡಿ ಕಸಿದು ಪರಾರಿಯಾಗಿದ್ದಾರೆ.

ಕಾರಿನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದು, ಸರ ಕಸಿದ ಶಾಕ್‍ ನಲ್ಲಿ ಶಾರದಮ್ಮ ಅವರು ಕಾರಿನ ನಂಬರ್ ದಾಖಲಿಸಲು ಸಾಧ್ಯವಾಗಿಲ್ಲ. ಹತ್ತಿರದ ಮನೆಗೆ ಬಂದು ಸುಧಾರಿಸಿಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಬ್ಯಾಟರಾಯನಪುರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ