ದೇವಸ್ಥಾನದ ಹುಂಡಿಗೆ ಕನ್ನ: ಲಕ್ಷಾಂತರ ಕೊಳ್ಳೆ !07-08-2017 552

ಮೈಸೂರು: ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು, ಕೊಳ್ಳೆ ಹೊಡೆದು ಪರಾರಿಯಾಗಿರುವ ಘಟನೆ, ಮೈಸೂರು ಜಿಲ್ಲೆಯ, ಹಳೇ ತಿರುಮಕೂಡಲಿನಲ್ಲಿ ನಡೆದಿದೆ. ಟಿ.ನರಸೀಪುರದ  ಚೌಡೇಶ್ವರಿ ದೇವಾಲಯದ ಕಿಟಕಿ ಮುರಿದು ಒಳ ನುಗ್ಗಿರುವ ಕಳ್ಳರು, ದೇವಾಲಯದ ಎರಡು ಹುಂಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಟಿ.ನರಸೀಪುರ ಪಟ್ಟಣ ಪೊಲೀಸರು ಭೇಟಿ ನೀಡಿದ್ದೂ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದೂ, ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ