ಪ್ರಧಾನಿ ಮನದ ಮಾತು..!28-07-2017 548

ನವದೆಹಲಿ: ನಾಡಿದ್ದು, ಭಾನುವಾರ ಆಕಾಶವಾಣಿಯ ಮನ್‍-ಕಿ-ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರದ ಜನತೆಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇದು ಪ್ರಧಾನಿ ಅವರ ಮನ್-ಕಿ-ಬಾತ್ ಕಾರ್ಯಕ್ರಮದ 34ನೇ ಆವೃತ್ತಿಯಾಗಿದೆ. ಈ ಕಾರ್ಯಕ್ರಮವು ದೇಶಾದ್ಯಂತ ಆಕಾಶವಾಣಿ ಮತ್ತು ದೂರದರ್ಶನ ಜಾಲದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ಪ್ರಸಾರವಾಗಲಿದೆ.

ಆಕಾಶವಾಣಿಯು, ಮನ್-ಕಿ-ಬಾತ್ ಹಿಂದಿ ಪ್ರಸಾರದ ನಂತರ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಿವೆ. ಪ್ರಾದೇಶಿಕ ಭಾಷೆಯ ಅವತರಣಿಕೆಯನ್ನು ಅಂದು ರಾತ್ರಿ 8 ಗಂಟೆಗೆ ಎಲ್ಲಾ ಬಾನುಲಿ ಕೇಂದ್ರಗಳು ಮರುಪ್ರಸಾರ ಮಾಡಲಿವೆ ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ನವದೆಹಲಿ ಪ್ರಧಾನಿ ಮನದ ಮಾತು..!