ನಿತೀಶ್ ಕುಮಾರ್ ರಾಜಕೀಯ ಅವಕಾಶಾವಾದಿ..?28-07-2017 581

ನವದೆಹಲಿ: ಬಿಹಾರದ ರಾಜಕೀಯ ಹೈ-ಡ್ರಾಮಾದಲ್ಲಿ, ಜೆಡಿಯುನ ಮುಖ್ಯಸ್ಥರಾದ ನಿತೀಶ್ ಕುಮಾರ್ ಅವರು ನಿನ್ನೆಯಷ್ಟೇ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೂ ಆಗಿದೆ. ಇನ್ನು ಬಿಹಾರದ ಈ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ರಾಷ್ಟ್ರೀಯ ಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ತಮ್ಮ  ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸದಿದ್ದರೂ ತನ್ನ ಅಧಿಕಾರ ಮುಂದುವರೆಸಿರುವ ಮೂರನೇ  ರಾಜ್ಯ ಬಿಹಾರ ಎಂದು, ಹಲವರು ಅಭಿಪ್ರಾಯ ಪಟ್ಟಿದ್ದಾರೆ. ನಿನ್ನೆಯಷ್ಟೇ ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿಯವರು, ಬಿಹಾರದ ಈ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಕೆಟ್ಟ ಸಂದೇಶವನ್ನು ರವಾನಿಸಲಿವೆ ಎಂದು ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದರು. ಇನ್ನು ಇದೇ ವಿಚಾರವಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ  ಆನಂದ್ ಸಿಂಗ್, ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಕೈಜೋಡಿಸಿರುವುದು ಕೆಟ್ಟ ಸಾಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ. ಇವರು ‘ರಾಜಕೀಯ ಅವಕಾಶಾವಾದಿ’ ಎಂದು ಹೇಳಿದ್ದಾರೆ. ಮತ್ತು ಮಾಹಾ ಮೈತ್ರಿ ಮಾಡಿಕೊಳ್ಳುವಾಗ ಲಾಲಾ ಪ್ರಸಾದ್ ಅವರ ಮೇಲಿನ ಆರೋಪಗಳ ಬಗ್ಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅವರು ಮಾಡಿರು ಈ ಕೆಲಸವನ್ನು ಬಿಹಾರದ ಜನತೇ ಎಂದಿಗೂ ಮರೆಯುವುದಿಲ್ಲ, ಭವಿಷ್ಯದಲ್ಲಿ ಇವರನ್ನು ಯಾರು ನಂಬುವುದಿಲ್ಲ ಎಂದುರು.   


ಒಂದು ಕಮೆಂಟನ್ನು ಬಿಡಿ